ಸ್ವಿಟ್ಸರ್‌ಲ್ಯಾಂಡ್: ಫೈಝರ್ ಬಳಕೆಗೆ ಅನುಮೋದನೆ
Update: 2020-12-20 00:01 IST
ಜಿನೀವ (ಸ್ವಿಟ್ಸರ್‌ಲ್ಯಾಂಡ್), ಡಿ. 19: ಎರಡು ತಿಂಗಳ ಪರಿಶೀಲನೆಯ ಬಳಿಕ, ಫೈಝರ್-ಬಯೋಎನ್‌ಟೆಕ್ ಕೊರೋನ ಲಸಿಕೆಯನ್ನು ಸ್ವಿಟ್ಸರ್‌ಲ್ಯಾಂಡ್‌ನಲ್ಲಿ ಬಳಸಲು ದೇಶದ ಔಷಧ ನಿಯಂತ್ರಣ ಪ್ರಾಧಿಕಾರ ಸ್ವಿಸ್‌ಮೆಡಿಕ್ ಅನುಮೋದನೆ ನೀಡಿದೆ.
‘‘ಲಭ್ಯವಿರುವ ಮಾಹಿತಿಗಳ ಆಳಿ ಪರಿಶೀಲನೆಯ ಬಳಿಕ, ಫೈಝರ್-ಬಯೋಎನ್‌ಟೆಕ್ ಅಭಿವೃದ್ಧಿಪಡಿಸಿರುವ ಕೋವಿಡ್-19 ಲಸಿಕೆಯು ಸುರಕ್ಷಿತವಾಗಿದೆ ಹಾಗೂ ಅದರ ಪ್ರಯೋಜನವು ಸಂಭಾವ್ಯ ಹಾನಿಯನ್ನು ಮೀರಿಸುತ್ತದೆ ಎಂಬ ನಿರ್ಧಾರಕ್ಕೆ ಸ್ವಿಸ್‌ಮೆಡಿಕ್ ಬಂದಿದೆ’’ ಎಂದು ಅದು ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಇದು ಸ್ವಿಟ್ಸರ್‌ಲ್ಯಾಂಡ್‌ನಲ್ಲಿ ಕೊರೋನ ವೈರಸ್ ವಿರುದ್ಧ ಬಳಕೆಗೆ ಅನುಮೋದನೆ ಪಡೆದ ಮೊದಲ ಲಸಿಕೆಯಾಗಿದೆ.