ಬ್ರಿಟನ್‌ನಿಂದ ಆಗಮಿಸುವ ವಿಮಾನಗಳನ್ನು ತಕ್ಷಣವೇ ನಿಷೇಧಿಸಿ: ಕೇಜ್ರಿವಾಲ್

Update: 2020-12-21 07:29 GMT

ಹೊಸದಿಲ್ಲಿ: ಬ್ರಿಟನ್‌ನಲ್ಲಿ ಹೊಸ ಪ್ರಭೇದದ ಕೊರೋನ ವೈರಸ್ ಕಾಣಿಸಿಕೊಂಡಿರುವ ಕಾರಣ ತಕ್ಷಣವೇ ಬ್ರಿಟನ್‌ನಿಂದ ಆಗಮಿಸುತ್ತಿರುವ ವಿಮಾನಗಳನ್ನು ನಿಷೇಧಿಸಬೇಕೆಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರಕಾರವನ್ನು ಆಗ್ರಹಿಸಿದರು.

ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಹೊಸ ಪ್ರಬೇಧದ ಕೊರೋನ ವೈರಸ್ ಕಾಣಿಸಿಕೊಂಡಿದೆ. ಅದು ವೇಗವಾಗಿ ಹರಡುವ ವೈರಸ್ ಆಗಿದೆ. ಹೀಗಾಗಿ ಬ್ರಿಟನ್‌ನಿಂದ ದೇಶಕ್ಕೆ ಬರುತ್ತಿರುವ ಎಲ್ಲ ವಿಮಾನಗಳನ್ನು ತುರ್ತಾಗಿ ನಿಷೇಧಿಸಬೇಕೆಂದು ಕೇಂದ್ರ ಸರಕಾರವನ್ನು ವಿನಂತಿಸಿಕೊಳ್ಳುತ್ತೇನೆ ಎಂದು ಸೋಮವಾರ ಬೆಳಗ್ಗೆ ಕೇಜ್ರಿವಾಲ್ ಟ್ವೀಟಿಸಿದರು.

ಹೊಸ ಪ್ರಬೇಧದ ಕೊರೋನ ವೈರಸ್ ಕೈಮೀರಿ ಹೋಗುತ್ತಿರುವ ಕಾರಣ ಲಂಡನ್ ಹಾಗೂ ಆಗ್ನೇಯ ಇಂಗ್ಲೆಂಡ್‌ನಲ್ಲಿ ಕಠಿಣ ಲಾಕ್‌ಡೌನ್ ಜಾರಿ ಮಾಡಲಾಗಿದೆ ಎಂದು ಬ್ರಿಟಿಷ್ ಆರೋಗ್ಯ ಸಚಿವರು ರವಿವಾರ ಎಚ್ಚರಿಕೆ ನೀಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News