ಗೋ ಮಾಂಸದ ಕೊರತೆ ಹಿನ್ನೆಲೆ: ನೆರೆ ರಾಜ್ಯಗಳಿಂದ ಗೋವು ಖರೀದಿಸಬಹುದು ಎಂದ ಗೋವಾ ಸಿಎಂ

Update: 2020-12-22 13:02 GMT

ಪಣಜಿ: ರಾಜ್ಯ ಎದುರಿಸುತ್ತಿರುವ ಗೋ ಮಾಂಸದ ಕೊರತೆಯನ್ನು ನೀಗಿಸುವ ಉದ್ದೇಶದಿಂದ ನೆರೆ ರಾಜ್ಯಗಳಿಂದ ಗೋವುಗಳನ್ನು ಖರೀದಿಸಲಾಗುವುದು ಎಂದು  ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಂಗಳವಾರ ಹೇಳಿದ್ದಾರೆ.

ಕರ್ನಾಟಕದಿಂದ ಗೋವಾಕ್ಕೆ ಗರಿಷ್ಠ ಪ್ರಮಾಣದ ಮಾಂಸ ಪೂರೈಕೆಯಾಗುತ್ತಿತ್ತು. ಬಿಜೆಪಿ ಆಡಳಿತವಿರುವ ಕರ್ನಾಟಕದಲ್ಲೀಗ ಗೋಹತ್ಯೆಯನ್ನು ನಿಷೇಧಿಸಲಾಗಿದೆ. ಹೀಗಾಗಿ ಬಿಜೆಪಿ ಆಡಳಿತವಿರುವ ನೆರೆಯ ರಾಜ್ಯ ಗೋವಾದಲ್ಲಿ ಗೋ ಮಾಂಸದ ಕೊರತೆ ಎದುರಾಗಿದೆ.

"ಗೋ ಮಾಂಸವನ್ನು ಪೂರೈಕೆ ಮಾಡುವ ಏಜೆಂಟರು ಬೇಡಿಕೆಗೆ ತಕ್ಕಷ್ಟು ಮಾಂಸ ಖರೀದಿಸಲು ವಿಫಲರಾದರೆ ಅವರು ನೆರೆ ರಾಜ್ಯಗಳಿಂದ ಗೋವುಗಳನ್ನು ಖರೀದಿಸಬಹುದು. ಅವುಗಳನ್ನು ಗೋವಾ ಮೀಟ್ ಕಾಂಪ್ಲೆಕ್ಸ್ ಲಿ.(ಜಿಎಂಸಿಎಲ್)ನಲ್ಲಿ ವಧೆ ಮಾಡಬಹುದು'' ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಸಾವಂತ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News