ಕೃಷಿ ಕಾನೂನು ಕುರಿತ ಚರ್ಚೆಗೆ ವಿಶೇಷ ಅಧಿವೇಶನ ನಡೆಸಲು ಅನುಮತಿ ನಿರಾಕರಿಸಿದ ಕೇರಳ ರಾಜ್ಯಪಾಲ
Update: 2020-12-22 22:58 IST
ತಿರುವನಂತಪುರ: ಒಂದು ದಿನದ ವಿಶೇಷ ವಿಧಾನಸಭಾ ಅಧಿವೇಶನಕ್ಕೆ ಅನುಮತಿ ನೀಡಲು ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ನಿರಾಕರಿಸಿದ್ದಾರೆ. ಸಿಪಿಎಂ ನೇತೃತ್ವದ ಸರಕಾರದ ಸಚಿವ ಸಂಪುಟವು ವಿಶೇಷ ಅಧಿವೇಶನ ನಡೆಸಲು ಸೋಮವಾರ ನಿರ್ಧರಿಸಿತ್ತು.
ವಿಶೇಷ ಅಧಿವೇಶನ ಕರೆಯಲು ಕಾರಣ ತಿಳಿಸುವಂತೆ ರಾಜ್ಯಪಾಲರು ಈ ಮೊದಲು ಸರಕಾರವನ್ನು ಕೇಳಿದ್ದರು.ರಾಜ್ಯಪಾಲರಿಗೆ ಉತ್ತರವನ್ನು ಕಳುಹಿಸಲಾಗಿದೆ. ಆದರೆ ಅವರು ಅನುಮತಿ ನಿರಾಕರಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.
ನೂತನ ಕೃಷಿ ಕಾನೂನುಗಳ ಕುರಿತು ಚರ್ಚಿಸಲು ಹಾಗೂ ಕಾನೂನಿನ ವಿರುದ್ಧ ನಿರ್ಣಯ ಮಂಡಿಸಲು ಡಿಸೆಂಬರ್ 23 ರಂದು ವಿಶೇಷ ಅಧಿವೇಶನ ಕರೆಯುವಂತೆ ರಾಜ್ಯಪಾಲರಿಗೆ ವಿನಂತಿಸಲು ಸಚಿವ ಸಂಪುಟ ನಿರ್ಧರಿಸಿತ್ತು.