ಐಎಸ್ ಎಲ್: ಒಡಿಶಾ-ನಾರ್ತ್ ಈಸ್ಟ್ ಪಂದ್ಯ ಡ್ರಾ
Update: 2020-12-22 23:29 IST
ಪಣಜಿ: ಒಡಿಶಾ ಹಾಗೂ ನಾರ್ತ್ ಈಸ್ಟ್ ಯುನೈಟೆಡ್ ನಡುವೆ ಮಂಗಳವಾರ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್ ಎಲ್)ಪಂದ್ಯವು 2-2 ಗೋಲುಗಳ ಅಂತರದಿಂದ ಡ್ರಾನಲ್ಲಿ ಕೊನೆಗೊಂಡಿದೆ.
ಒಡಿಶಾದ ಪರ ಡಿಯಾಗೊ ಮೌರಿಸಿಯೊ 22ನೇ ನಿಮಿಷದಲ್ಲಿ ಹಾಗೂ ಅಲೆಕ್ಸಾಂಡರ್ 67ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.
ನಾರ್ತ್ ಈಸ್ಟ್ ಯುನೈಟೆಡ್ ತಂಡದ ಪರ ಬೆಂಝಮಿನ್ ಲಾಂಬೊಟ್ 45ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಕ್ವಾಸಿ ಅಪ್ಪಿಯಾ 65ನೇನಿಮಿಷದಲ್ಲಿ ಪೆನಾಲ್ಟಿಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು.
ಅಲೆಕ್ಸಾಂಡರ್ ಐಎಸ್ ಎಲ್ ನಲ್ಲಿ ಗಳಿಸಿರುವ ಮೊದಲ ಗೋಲು ನೆರವಿನಿಂದ ಒಡಿಶಾ ಪಂದ್ಯವನ್ನು ಡ್ರಾ ಮಾಡಿತು.
ಈ ಫಲಿತಾಂಶದಿಂದಾಗಿ ಒಡಿಶಾ 10ನೇ ಸ್ಥಾನವನ್ನುಏರಿದರೆ, ಯುನೈಟೆಡ್ ನಾಲ್ಕನೇ ಸ್ಥಾನವನ್ನು ಉಳಿಸಿಕೊಂಡಿತು.