ಅಂಕಿಅಂಶಗಳ ಮೂಲಕ ಅಮಿತ್ ಶಾ ಟೀಕೆಗಳ ‘ಪೊಳ್ಳುತನ ’ ಬಯಲಿಗೆಳೆದ ಬ್ಯಾನರ್ಜಿ

Update: 2020-12-22 18:08 GMT

ಕೋಲ್ಕತಾ,ಡಿ.22: ಪ.ಬಂಗಾಳದ ಆರ್ಥಿಕತೆಯ ಕುರಿತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ತೀಕ್ಷ್ಣ ಟೀಕೆಯ ಹಿಂದಿನ ಸತ್ಯವನ್ನು ಮಂಗಳವಾರ ಅಂಕಿಅಂಶಗಳ ಮೂಲಕ ಬಹಿರಂಗಗೊಳಿಸಿದ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಶಾ ಟೀಕೆ ತಪ್ಪು ಎನ್ನುವುದನ್ನು ತಾನು ಸಾಬೀತು ಮಾಡಿದ್ದೇನೆ,ಇದಕ್ಕಾಗಿ ಅವರು ತನಗೆ ‘ಢೋಕ್ಲಾ ’ತಿನ್ನಿಸಬೇಕಿದೆ. ತಾನು ಢೋಕ್ಲಾ ಮತ್ತು ಇತರ ಗುಜರಾತಿ ಆಹಾರಗಳನ್ನು ಇಷ್ಟಪಡುತ್ತೇನೆ ಎಂದು ಹೇಳಿದರು.

ಬಿಜೆಪಿ ಮತ್ತು ಅಮಿತ್ ಶಾ ವಿರುದ್ಧ ತನ್ನ ದಾಳಿಯನ್ನು ಮುಂದುವರಿಸಿದ ಬ್ಯಾನರ್ಜಿ, ಪ.ಬಂಗಾಳದ ಆರ್ಥಿಕತೆಯ ದುಃಸ್ಥಿತಿ ಮತ್ತು ಅಪರಾಧಗಳ ಹೆಚ್ಚಳ ಕುರಿತು ಅವರ ಹೇಳಿಕೆಗಳು ಕಟ್ಟುಕಥೆಗಳಾಗಿವೆ ಎನ್ನುವುದು ಸಿದ್ಧವಾಗಿದೆ ಎಂದರು.

ವಾರಾಂತ್ಯದಲ್ಲಿ ಪ.ಬಂಗಾಳಕ್ಕೆ ತನ್ನ ಭೇಟಿ ಸಂದರ್ಭ ಶಾ ಅವರು,ಬ್ಯಾನರ್ಜಿ ಆಡಳಿತದಲ್ಲಿ ರಾಜ್ಯದಲ್ಲಿ ಕಾನೂನೇ ಇಲ್ಲವಾಗಿದೆ ಮತ್ತು ಅಭಿವೃದ್ಧಿಯು ಕುಂಠಿತಗೊಂಡಿದೆ ಎಂದು ಟೀಕಿಸಿದ್ದರು. ಆಗಿನಿಂದಲೂ ಬ್ಯಾನರ್ಜಿ ಪ್ರತಿದಿನ ಸುದ್ದಿಗೋಷ್ಠಿಯಲ್ಲಿ ಅಂಕಿಅಂಶಗಳೊಂದಿಗೆ ಶಾ ಹೇಳಿಕೆಗಳನ್ನು ತಿರಸ್ಕರಿಸುತ್ತಿದ್ದಾರೆ.

ಶಾ ಬಂಗಾಳವನ್ನು ದುಃಸ್ವಪ್ನಗಳ ನಾಡು ಎಂಬಂತೆ ಬಿಂಬಿಸಿದ್ದಾರೆ. ಬಂಗಾಳವು ಅಭಿವೃದ್ಧಿಯಿಲ್ಲದ,ನಿರುದ್ಯೋಗ ತಾಂಡವವಾಡುತ್ತಿರುವ ರಾಜ್ಯವೆಂಬಂತೆ ಅವರು ಚಿತ್ರಿಸಿದ್ದಾರೆ. ಸತ್ಯ ಹೇಳುವುದಕ್ಕೆ ತನ್ನ ಆಕ್ಷೇಪವಿಲ್ಲ. ಆದರೆ ಟೀಕೆಗಳಲ್ಲಿ ಸತ್ಯವಿಲ್ಲದಿದ್ದರೆ ತಾನದನ್ನು ಪ್ರಶ್ನಿಸುತ್ತೇನೆ ಎಂದು ಬ್ಯಾನರ್ಜಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News