ಲಾಕ್ ಡೌನ್ ವೇಳೆ ಸಹಾಯ ಮಾಡಿದ ಅಗ್ರ-10 ಸಂಸದರ ಪಟ್ಟಿಯಲ್ಲಿ ರಾಹುಲ್ ಗಾಂಧಿ, ಗಡ್ಕರಿ ಹೆಸರು

Update: 2020-12-24 06:15 GMT

ಹೊಸದಿಲ್ಲಿ:ಈ ವರ್ಷ ಕೊರೋನ-19 ಕಾರಣಕ್ಕೆ ದೇಶಾದ್ಯಂತ ವಿಧಿಸಲಾಗಿದ್ದ ಲಾಕ್‌ಡೌನ್ ವೇಳೆ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಹಾಗೂ ವಯನಾಡ್ ಸಂಸದ ರಾಹುಲ್ ಗಾಂಧಿ, ಉಜ್ಜೈನ್‌ನ ಬಿಜೆಪಿ ಸಂಸದ ಅನಿಲ್ ಫಿರೋಜಿಯಾ, ವೈಎಸ್ ಆರ್‌ಸಿಪಿ ನೆಲ್ಲೂರ್ ಸಂಸದ ಅಡಾಲಾ ಪ್ರಭಾಕರ ರೆಡ್ಡಿ ತಾವು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಹೆಚ್ಚು ಸಹಾಯ ಮಾಡಿದ ಅಗ್ರ-10 ರಾಜಕೀಯ ನಾಯಕರಾಗಿದ್ದಾರೆ ಎಂದು ಹೊಸದಿಲ್ಲಿ ಮೂಲದ ನಾಗರಿಕ ವೇದಿಕೆ ಗವರ್ನ್ ಐ ಸಿಸ್ಟಮ್ಸ್ ನಡೆಸಿರುವ ಸಮೀಕ್ಷೆಯೊಂದರಲ್ಲಿ ಬಹಿರಂಗವಾಗಿದೆ.

ಅಕ್ಟೋಬರ್ 1ರಂದು ಸಮೀಕ್ಷೆಯನ್ನು ಪ್ರಾರಂಭಿಸಲಾಯಿತು. 25 ಲೋಕಸಭಾ ಸಂಸದರನ್ನು ಅವರ ಪರವಾಗಿ ಸ್ವೀಕರಿಸಿದ ನಾಮಪತ್ರಗಳ ಆಧಾರದ ಮೇಲೆ ಕಿರುಪಟ್ಟಿ ರಚಿಸಲಾಗಿದೆ. ಕ್ಷೇತ್ರ ಸಂದರ್ಶನಗಳು ಹಾಗೂ ಆಯಾ ಕ್ಷೇತ್ರಗಳ ಪ್ರತಿಕ್ರಿಯೆಯ ಆಧಾರದ ಮೇಲೆ ಅಗ್ರ-10 ಸಂಸದರನ್ನು ಗುರುತಿಸಲಾಯಿತು.

ಅಗ್ರ 10 ಸಂಸದರುಗಳೆಂದರೆ: ಅನಿಲ್ ಫಿರೊಜಿಯಾ(ಬಿಜೆಪಿ), ಎ.ಪ್ರಭಾಕರ ರೆಡ್ಡಿ(ವೈಎಸ್‌ಆರ್‌ಸಿಪಿ), ರಾಹುಲ್ ಗಾಂಧಿ(ಕಾಂಗ್ರೆಸ್), ಮಹುವಾ ಮೊಐತ್ರಾ(ಟಿಎಂಸಿ), .ತೇಜಸ್ವಿ ಸೂರ್ಯ(ಬಿಜೆಪಿ), ಹೇಮಂತ್ ತುಕಾರಾಮ್ ಗೋಡ್ಸೆ(ಶಿವಸೇನೆ), ಸುಖ್ಬೀರ್ ಸಿಂಗ್ ಬಾದಲ್(ಎಸ್‌ಎಡಿ), ಶಂಕರ್ ಲಾಲ್ವಾಣಿ(ಬಿಜೆಪಿ), ಡಾ.ಟಿ. ಸುಮತಿ(ಡಿಎಂಕೆ) ಹಾಗೂ ನಿತಿನ್ ಜೈರಾಮ್‌ಗಡ್ಕರಿ(ಬಿಜೆಪಿ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News