ಕೋವಿಡ್ ಇದ್ದೂ ಕೆಲಸಕ್ಕೆ ತೆರಳಿದ ವ್ಯಕ್ತಿ: 7 ಮಂದಿ ಮೃತ್ಯು, 300 ಮಂದಿ ಕ್ವಾರಂಟೈನ್ ನಲ್ಲಿ!

Update: 2020-12-24 07:28 GMT
ಸಾಂದರ್ಭಿಕ ಚಿತ್ರ

ವಾಶಿಂಗ್ಟನ್,ಡಿ.24: ಅಮೆರಿಕಾದ ದಕ್ಷಿಣ ಒರೆಗಾನ್ ಭಾಗದಲ್ಲಿ ನಡೆದ ಎರಡು ಕೊರೋನ ಆಸ್ಫೋಟನಾ ಪ್ರಕರಣವು ಅಲ್ಲಿನ ಜನರನ್ನು ಭಯಭೀತರನ್ನಾಗಿಸಿದೆ. ಇದು ಯಾವುದೋ ಜನಜಂಗುಳಿ ಸೇರಿದ ಕಾರ್ಯಕ್ರಮಗಳಿಂದ ನಡೆದದ್ದಲ್ಲ. ಓರ್ವ ವ್ಯಕ್ತಿಯಿಂದಾಗಿ ಕೊರೋನ ಹರಡಿದೆ ಎಂದು ndtv.com ವರದಿಯಲ್ಲಿ ತಿಳಿಸಿದೆ.

ಡಗ್ಲಾಸ್ ಕೌಂಟಿಯ ಅಧಿಕಾರಿಗಳ ಪ್ರಕಾರ, "ಓರ್ವ ವ್ಯಕ್ತಿಯು ತನಗೆ ಕೊರೋನ ಪಾಸಿಟಿವ್ ಇದೆ ಎಂದು ತಿಳಿದಿದ್ದರೂ ಕೂಡಾ, ಕೆಲಸಕ್ಕೆಂದು ಕಚೇರಿಗೆ ತೆರಳಿದ್ದು, ಈತನ ಕಾರಣದಿಂದಾಗಿ ವೈರಸ್ ಹರಡಿ ಏಳು ಮಂದಿ ಮೃತಪಟ್ಟಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ವ್ಯಕ್ತಿಯೋರ್ವನ ಕಾರಣದಿಂದಾಗಿ ಒಟ್ಟು ಮುನ್ನೂರಕ್ಕೂ ಹೆಚ್ಚು ಮಂದಿ ಕ್ವಾರಂಟೈನ್ ನಲ್ಲಿದ್ದಾರೆ ಹಾಗೂ ಅವರೆಲ್ಲರೂ ಭಯಭೀತರಾಗಿದ್ದಾರೆ. ಅವರ ಕುರಿತು ನಮಗೆ ಅನುಕಂಪವಿದೆ" ಎಂದು ಡಗ್ಲಾಸ್ ಕೌಂಟಿಯ ಸಾರ್ವಜನಿಕ ಆರೋಗ್ಯ ಅಧಿಕಾರಿ ಬಾಬ್ ಡ್ಯಾನನ್ ಹೋಫರ್ ತಿಳಿಸಿದ್ದಾರೆ.

ಒರೆಗಾನ್ ನಲ್ಲಿ ಇದುವರೆಗೆ 1,347 ಸಾವು ಸಂಭವಿಸಿದ್ದು, 103,755 ಮಂದಿ ಸೋಂಕು ಪೀಡಿತರಾಗಿದ್ದಾರೆ. ಇನ್ನು ಈ ಪ್ರತ್ಯೇಕ ಪ್ರಕರಣಗಳಲ್ಲಿ ಯಾವ ಕಚೇರಿಯಿಂದ ಮತ್ತು ಯಾವ ವ್ಯಕ್ತಿಗಳಿಂದ ವೈರಸ್ ಹರಡಿದೆ ಅನ್ನುವುದನ್ನು ಅಧಿಕಾರಿಗಳು ಗೌಪ್ಯವಾಗಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News