×
Ad

ಬಿಜೆಪಿ ಅಧ್ಯಕ್ಷನ ನೇತೃತ್ವದಲ್ಲಿ ದಿಲ್ಲಿ ಜಲಮಂಡಳಿ ಕಚೇರಿ ಧ್ವಂಸ: ಆಪ್ ಆರೋಪ

Update: 2020-12-24 15:20 IST
Photo: Twitter (@THNewDelhi)

ಹೊಸದಿಲ್ಲಿ,ಡಿ.24: ಆಮ್ ಆದ್ಮಿ ಪಕ್ಷದ ಪ್ರಮುಖ ವಕ್ತಾರ ಹಾಗೂ ದಿಲ್ಲಿ ಜಲಮಂಡಳಿಯ ಉಪಾಧ್ಯಕ್ಷರಾಗಿರುವ ರಾಘವ್ ಛಡ್ಡಾರವರ ಕಚೇರಿಯನ್ನು ಬಿಜೆಪಿ ಪಕ್ಷದ ಕಾರ್ಯರ್ತರು ಧ್ವಂಸಗೊಳಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ದಿಲ್ಲಿ ಜಲಮಂಡಳಿಗೆ ಸೇರಿದ ಕಚೇರಿಯನ್ನು ಧ್ವಂಸಗೊಳಿಸಲಾಗಿದೆ.

ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ನೇತೃತ್ವದಲ್ಲಿ ಮಧ್ಯಾಹ್ನ 12:30 ಕ್ಕೆ ದಿಲ್ಲಿ ಜಲ ಮಂಡಳಿಯ ಕಚೇರಿಯನ್ನು ಧ್ವಂಸ ಮಾಡಲಾಗಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕಚೇರಿಯನ್ನು ಧ್ವಂಸಗೊಳಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ಕುರಿತಾದಂತೆ ವೀಡಿಯೋವನ್ನು ರಾಘವ್ ಛಡ್ಡಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. “ಮೊದಲು ಅರವಿಂದ್ ಕೇಜ್ರಿವಾಲ್ ರನ್ನು ಗೃಹ ಬಂಧನಕ್ಕೊಳಪಡಿಸಿದರು. ಬಳಿಕ ಮನೀಷ್ ಸಿಸೋಡಿಯಾ ನಿವಾಸದ ಮೇಲೆ ದಾಳಿ ನಡೆಯಿತು.ಈಗ ರಾಘವ್ ಛಡ್ಡಾ ಕಚೇರಿಯ ಮೇಲೆ ದಾಳಿ ನಡೆಸಲಾಗುತ್ತಿದೆ. ಬಿಜೆಪಿ ಯಾವುದರ ಕುರಿತು ಭಯಪಡುತ್ತಿದೆ? ಎಂದು ಆಮ್ ಆದ್ಮಿ ಪಕ್ಷ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News