'ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯರಿಗೆ ಅಂಚೆ ಮತದಾನ ಸೌಲಭ್ಯವಿಲ್ಲ' ಎಂಬ ವರದಿಯನ್ನು ನಿರಾಕರಿಸಿದ ಚುನಾವಣಾ ಆಯೋಗ

Update: 2020-12-24 12:08 GMT

 ಹೊಸದಿಲ್ಲಿ,ಡಿ.24: ಗಲ್ಫ್ ರಾಷ್ಟ್ರಗಳನ್ನು ಹೊರತುಪಡಿಸಿ ಕೆಲವೊಂದು ಆಯ್ದ ದೇಶಗಳಿಗೆ ಆದ್ಯತೆಯ ಮೇರೆಗೆ ಇಟಿಪಿಬಿಎಸ್ (ಇಲೆಕ್ಟ್ರಾನಿಕಲಿ ಟ್ರಾನ್ಸ್‍ಮಿಟೆಡ್ ಪೋಸ್ಟ್ ಬ್ಯಾಲೆಟ್ ಸಿಸ್ಟಂ)  ಅಂಚೆ ಮತದಾನ ಸೌಲಭ್ಯವನ್ನು ಒದಗಿಸಲಾಗುವುದು  ಎಂಬ ವರದಿಗಳನ್ನು ಭಾರತದ ಚುನಾವಣಾ ಆಯೋಗವು ಅಲ್ಲಗಳೆದಿದೆ. ‘ಇಂತಹ ಯಾವುದೇ ಪ್ರಸ್ತಾವನೆಯಿಲ್ಲ’ ಎಂದು ಸಂಸದರೊಬ್ಬರ  ಪ್ರಶ್ನೆಗೆ ಡಿಸೆಂಬರ್ 23ರಂದು ನೀಡಿದ ಉತ್ತರದಲ್ಲಿ ಆಯೋಗ ತಿಳಿಸಿದೆ.

``ಸಾಗರೋತ್ತರ ದೇಶಗಳಲ್ಲಿರುವ ಭಾರತೀಯ ಮತದಾರರಿಗೆ ಮತದಾನ ಮಾಡಲು ಅನುಕೂಲ ಕಲ್ಪಿಸುವ ಆಯೋಗದ ನಿರಂತರ ಯತ್ನದ ಭಾಗವಾಗಿ ಈಗಿನ ಪ್ರಸ್ತಾವನೆಯಿದ್ದರೂ, ಈ ಪ್ರಸ್ತಾವನೆಯನ್ನು ಕಾನೂನು ಸಚಿವಾಲಯ ಇನ್ನಷ್ಟೇ ಅನುಮೋದಿಸಬೇಕಿದೆ.  ಇದು ಅನುಮೋದನೆಗೊಂಡ ನಂತರ ಜಗತ್ತಿನಾದ್ಯಂತ ಜಾರಿಗೊಳಿಸಲಾಗುವುದು. ಕೆಲವೊಂದು ಆಯ್ದ ದೇಶಗಳಲ್ಲಿರುವವರಿಗೆ ಮಾತ್ರ ಸೌಲಭ್ಯ ನೀಡಲಾಗುವುದಿಲ್ಲ,'' ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News