ಸಾಲ ಒಪ್ಪಂದದ ಕುರಿತು ಶೇರುದಾರರಿಂದ ಬಚ್ಚಿಟ್ಟ ಆರೋಪ : ಎನ್‍ಡಿಟಿವಿಗೆ ರೂ 27 ಕೋಟಿ ದಂಡ ವಿಧಿಸಿದ ಸೆಬಿ

Update: 2020-12-25 06:16 GMT
ndtv.com

ಹೊಸದಿಲ್ಲಿ,ಡಿ.25: ಸಂಸ್ಥೆಯ ಶೇರುದಾರರಿಂದ ಕೆಲ ಸಾಲದ ಒಪ್ಪಂದಗಳು ಕುರಿತಾದ ಮಾಹಿತಿಯನ್ನು ಬಚ್ಚಿಟ್ಟಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಸೆಕ್ಯುರಿಟೀಸ್ ಎಕ್ಸ್‍ಚೇಂಜ್ ಬೋರ್ಡ್ ಆಫ್ ಇಂಡಿಯಾ ಎನ್‍ಡಿಟಿವಿ ಪ್ರವರ್ತಕರಾದ ಪ್ರಣಯ್ ರಾಯ್, ಅವರ ಪತ್ನಿ ರಾಧಿಕಾ ರಾಯ್ ಹಾಗೂ ಆರ್‍ಆರ್‍ಪಿಆರ್ ಹೋಲ್ಡಿಂಗ್ಸ್‍ಗೆ ರೂ 27 ಕೋಟಿ ದಂಡ ವಿಧಿಸಿದೆ.

ಸಾಲ ಒಪ್ಪಂದದ ಕುರಿತಾದ ಕೆಲವೊಂದು ನಿಬಂಧನೆಗಳು ಎನ್‍ಡಿಟಿವಿ ಶೇರುದಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಸೆಬಿ ಹೇಳಿದೆ.

ಮೇಲಿನ ಆರೋಪದ ಕುರಿತಾದ ತನಿಖೆ ಮೊದಲ ಬಾರಿ 2017ರಲ್ಲಿ ಆರಂಭಿಸಲಾಗಿತ್ತು. ಆಗ ಎನ್‍ಡಿಟಿವಿಯ ಶೇರುದಾರ ಸಂಸ್ಥೆಯಾಗಿದ್ದ ಕ್ವಾಂಟಮ್ ಸೆಕ್ಯುರಿಟೀಸ್ ಪ್ರೈವೇಟ್ ಲಿಮಿಟೆಡ್ ತನ್ನ ದೂರಿನಲ್ಲಿ ಎನ್‍ಡಿಟಿವಿಯು ವಿಶ್ವಪ್ರವರ್ಧನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್(ವಿಸಿಪಿಎಲ್) ಜತೆಗಿನ ಸಾಲ ಒಪ್ಪಂದದ ಕುರಿತಾದ ಕೆಲವೊಂದು ಮಾಹಿತಿಯನ್ನು  ಬಹಿರಂಗಗೊಳಿಸದೆ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿತ್ತು.

ಸೆಬಿ ಪ್ರಕಾರ ಎನ್‍ಡಿಟಿವಿಯ ಒಂದು ಸಾಲ ಒಪ್ಪಂದ ಐಸಿಐಸಿಐ ಬ್ಯಾಂಕ್ ಜತೆಗಿದ್ದರೆ ಇನ್ನೆರಡು ವಿಪಿಸಿಎಲ್ ಜತೆಗಿತ್ತು. ಐಸಿಐಸಿಐ ಬ್ಯಾಂಕ್‍ಗೆ ರೂ 350 ಕೋಟಿ ಸಾಲ ಪಾವತಿಸುವ ಕುರಿತಂತೆ ವಿಪಿಸಿಎಲ್ ಜತೆ 2009ರಲ್ಲಿ ಒಪ್ಪಂದಕ್ಕೆ ಬಂದಿದ್ದರೆ ಇನ್ನೊಂದು ಒಪ್ಪಂದವನ್ನು ಒಂದು ವರ್ಷದ ನಂತರ ರೂ 53.85 ಕೋಟಿಗೆ ಸಹಿ ಹಾಕಲಾಗಿತ್ತು ಎಂದು ಸೆಬಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News