×
Ad

ಶೀಘ್ರ ಸಾಲ ನೀಡುವ ಅನಧಿಕೃತ ಆ್ಯಪ್ ಗಳ ಕುರಿತು ಜಾಗರೂಕರಾಗಿ: ರಿಸರ್ವ್ ಬ್ಯಾಂಕ್

Update: 2020-12-25 12:38 IST

ಹೊಸದಿಲ್ಲಿ,ಡಿ.25: ಯಾವುದೇ ತೊಂದರೆ, ಅಡೆತಡೆಗಳನ್ನು ಅನುಭವಿಸದೇ ಶೀಘ್ರವೇ ನಿಮಗೆ ಸಾಲ ಮಂಜೂರು ಮಾಡುತ್ತೇವೆ ಎಂಬ ಅನಧಿಕೃತ ಡಿಜಿಟಲ್ ಆ್ಯಪ್ ಗಳ ತಂತ್ರಗಳಿಗೆ ಬಲಿ ಬೀಳದಿರಿ, ಎಚ್ಚರಿಕೆ ವಹಿಸಿ ಎಂದು ಭಾರತೀಯ ರಿಸರ್ವ್ ಬ್ಯಾಕ್ ಹೇಳಿಕೆ ನೀಡಿದೆ. ದೇಶದಾದ್ಯಂತ ಈ ರೀತಿಯ ಅನಧಿಕೃತ ಶೀಘ್ರ ಸಾಲ ವಂಚನೆಯ ಜಾಲಗಳು ಪತ್ತೆಯಾದ ಬಳಿಕ ರಿಸರ್ವ್ ಬ್ಯಾಂಕ್ ಈ ಹೇಳಿಕೆ ಹೊರಡಿಸಿದೆ.

ಕೆಲವು ವಾರಗಳ ಹಿಂದೆ ಮೂರು ಮಂದಿ ಈ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಲ ಮರುಪಾವತಿ ಮಾಡುವಂತೆ ತೀವ್ರ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಈ ಕುರಿತಾದಂತೆ ದಿಲ್ಲಿ, ಗುರುಗ್ರಾಮ ಮತ್ತು ಹೈದರಾಬಾದ್ ನಿಂದ ಒಟ್ಟು 17 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

“ವರದಿಗಳ ಪ್ರಕಾರ ಕೆಲವು ವ್ಯಕ್ತಿಗಳು ಮತ್ತು ಸಣ್ಣ ಕೈಗಾರಿಕೆಗಳನ್ನುನಡೆಸುವವರು ಇವರ ಮೋಸಕ್ಕೆ ಬಲಿಯಾಗುತ್ತಿದ್ದಾರೆ. ಡಿಜಿಟಲ್ ಹಾಗೂ ಆ್ಯಪ್ ಗಳ ಮೂಲಕ ಶೀಘ್ರ ಮತ್ತು ತೊಂದರೆ ರಹಿತ ಸಾಲ ನೀಡುತ್ತೇವೆಂದು ಹೇಳಿ ಅಧಿಕ ಬಡ್ಡಿಯನ್ನು ವಿಧಿಸುತ್ತಾರೆ. ಬಳಿಕ ಸಾಲ ವಸೂಲಿ ಮಾಡಲು ಬಲವಂತದ ಮಾರ್ಗವನ್ನು ಅನುಸರಿಸುತ್ತಾರೆ. ಇದು ಮಾತ್ರವಲ್ಲದೇ ಮೊಬೈಲ್ ಫೋನ್ ಗಳಲ್ಲಿನ ಮಾಹಿತಿಗಳನ್ನು ದುರ್ಬಳಕೆ ಮಾಡುತ್ತಾರೆ” ಎಂದು ರಿಸರ್ವ್ ಬ್ಯಾಂಕ್ ತಿಳಿಸಿದ್ದಾಗಿ hindustantimes.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News