“ಈಗಿರುವ ಶಕ್ತಿಶಾಲಿ ಲಸಿಕೆಗಳಿಗೆ ಕೊರೋನದ ಹೊಸ ಪ್ರಭೇದಗಳು ತಲೆಬಾಗುತ್ತದೆ”

Update: 2020-12-25 14:51 GMT

ವಾಶಿಂಗ್ಟನ್, ಡಿ. 25: ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಗಳಲ್ಲಿ ಪತ್ತೆಯಾಗಿರುವ ಕೊರೋನ ವೈರಸ್‌ನ ನೂತನ ಪ್ರಭೇದಗಳು ಜಗತ್ತಿನಲ್ಲಿ ಮತ್ತೆ ಆತಂಕ ಹರಡಿವೆಯಾದರೂ, ಈಗಾಗಲೇ ಅಭಿವೃದ್ಧಿಪಡಿಸಲಾಗಿರುವ ಶಕ್ತಿಶಾಲಿ ಲಸಿಕೆಗಳಿಗೆ ಈ ಪ್ರಭೇದಗಳು ತಲೆಬಾಗುತ್ತವೆ ಎಂಬ ವಿಶ್ವಾಸವನ್ನು ಪರಿಣತರು ವ್ಯಕ್ತಪಡಿಸಿದ್ದಾರೆ.

ಅದೂ ಅಲ್ಲದೆ, ಕೊರೋನ ವೈರಸ್ ಮುಂದಿನ ದಿನಗಳಲ್ಲಿ ಇನ್ನಷ್ಟು ರೂಪಾಂತರ ಹೊಂದಿದರೂ, ನೂತನ ಪ್ರಭೇದಗಳ ವಿರುದ್ಧ ಪರಿಣಾಮಕಾರಿಯಾಗಲು ಲಸಿಕೆಗಳಿಗೆ ಕ್ಷಿಪ್ರ ಮಾರ್ಪಾಡುಗಳನ್ನು ತರಲು ಸಾಧ್ಯವಿದೆ ಎಂದು ಅವರು ಹೇಳುತ್ತಾರೆ.

‘‘ಲಸಿಕೆಗಳಿಗೆ ಇಂಥ ಬದಲಾವಣೆಯನ್ನು ನಿಮಿಷಗಳಲ್ಲಿ ತರಬಹುದು’’ ಎಂದು ಪೆನ್ಸಿಲ್ವೇನಿಯ ವಿಶ್ವವಿದ್ಯಾನಿಲಯದ ಪೆರೆಲ್‌ಮನ್ ಸ್ಕೂಲ್ ಆಫ್ ಮೆಡಿಸಿನ್‌ನ ವೈದ್ಯಕೀಯ ಪ್ರೊಫೆಸರ್ ಡ್ರೂ ವೈಸ್‌ಮನ್ ಹೇಳುತ್ತಾರೆ. ವೈಸ್‌ಮನ್, ಫೈಝರ್ ಮತ್ತು ಮೋಡರ್ನಾ- ಈ ಎರಡೂ ಲಸಿಕೆಗಳಲ್ಲಿ ಬಳಸಲಾಗಿರುವ ಆರ್‌ಎನ್‌ಎ ತಂತ್ರಜ್ಞಾನದ ಸಂಶೋಧಕರ ಪೈಕಿ ಒಬ್ಬರಾಗಿದ್ದಾರೆ.

‘‘ಅದು ತುಂಬಾ ಸುಲಭ’’ ಎಂದು ವೈಸ್‌ಮನ್ ಅಭಿಪ್ರಾಯಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News