×
Ad

ದೇಶದಲ್ಲಿ 23,067 ಕೊರೋನ ಸೋಂಕಿನ ಹೊಸ ಪ್ರಕರಣಗಳು ದಾಖಲು

Update: 2020-12-25 21:29 IST

ಹೊಸದಿಲ್ಲಿ, ಡಿ. 25: ಕಳೆದ 24 ಗಂಟೆಗಳಲ್ಲಿ 23,067 ಹೊಸ ಕೊರೋನ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ದೇಶದಲ್ಲಿ ಕೊರೋನ ಸೋಂಕಿನ ಹೊಸ ಪ್ರಕರಣಗಳಿಗಿಂತ ಗುಣಮುಖರಾಗುತ್ತಿರುವವರ ಸಂಖ್ಯೆ ಅಧಿಕವಾಗಿರುವುದು ಮುಂದುವರಿದಿದೆ ಎಂದು ಸರಕಾರದ ದತ್ತಾಂಶ ತಿಳಿಸಿದೆ.

ಈ ಅವಧಿಯಲ್ಲಿ 24,661 ಜನರು ಕೊರೋನ ಸೋಂಕಿನ ವಿರುದ್ಧ ಹೋರಾಡಿದರು. ಇವರಲ್ಲಿ 336 ಮಂದಿ ಅಸೌಖ್ಯದಿಂದ ಮೃತಪಟ್ಟರು. ಇದರೊಂದಿಗೆ ದೇಶದಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಒಟ್ಟು ಸಂಖ್ಯೆ 1 ಕೋಟಿ, 1 ಲಕ್ಷ ಹಾಗೂ 46 ಸಾವಿರಕ್ಕೆ ಏರಿಕೆಯಾಗಿದೆ. ಇದುವರೆಗೆ ಮೃತಪಟ್ಟವರ ಸಂಖ್ಯೆ 1,47,092ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸಕ್ರಿಯ ಕೊರೋನ ಸೋಂಕಿನ ಪ್ರಕರಣಗಳು ಅಥವಾ ಈಗಲೂ ವೈದ್ಯಕೀಯ ನಿಗಾದಲ್ಲಿ ಇರುವ ಕೊರೋನ ಸೋಂಕಿನ ಪ್ರಕರಣಗಳು 2.81 ಲಕ್ಷಕ್ಕೆ ಇಳಿಕೆಯಾಗಿದೆ.

 ಕಳೆದ 12 ದಿನಗಳಿಂದ ಭಾರದತದಲ್ಲಿ ದಿನನಿತ್ಯ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ 30 ಸಾವಿರ ಮೀರಿಲ್ಲ. ಅಲ್ಲದೆ, ಕಳೆದ ಕನಿಷ್ಠ 28 ದಿನಗಳಲ್ಲಿ ಹೊಸ ಸೋಂಕಿಗಿಂತ ಗುಣಮುಖರಾಗುತ್ತಿರುವ ಸಂಖ್ಯೆ ಅಧಿಕವಾಗಿದೆ ಎಂದು ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News