ಜೆಡಿಯು ಅಧ್ಯಕ್ಷರಾಗಿ ನಿತೀಶ್ ಕುಮಾರ್ ಆಪ್ತ ಆರ್.ಸಿ.ಪಿ. ಸಿಂಗ್ ಆಯ್ಕೆ

Update: 2020-12-27 17:57 GMT

ಹೊಸದಿಲ್ಲಿ, ಡಿ. 27: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಪ್ತ ಆರ್.ಸಿ.ಪಿ. ಸಿಂಗ್ ಅವರನ್ನು ಜನತಾ ದಳ (ಸಂಯುಕ್ತ)ದ ನೂತನ ಅಧ್ಯಕ್ಷರನ್ನಾಗಿ ರವಿವಾರ ಆಯ್ಕೆ ಮಾಡಲಾಗಿದೆ.

ಪಕ್ಷದ ಕಾರ್ಯಕಾರಿಣಿ ಸಭೆಯ ಸಂದರ್ಭ ಇತರ ಸದಸ್ಯರಿಂದ ಅನುಮೋದನೆಗೆ ಒಳಗಾದ ಆರ್.ಸಿ.ಪಿ. ಸಿಂಗ್ ಅವರನ್ನು ನಿತೀಶ್ ಕುಮಾರ್ ಅವರು ಪಕ್ಷದ ಉನ್ನತ ಹುದ್ದೆಗೆ ಪ್ರಸ್ತಾವಿಸಿದ್ದಾರೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

2019ರಲ್ಲಿ ಮೂರು ವರ್ಷಗಳಿಗೆ ಪಕ್ಷದ ಅಧ್ಯಕ್ಷರಾಗಿ ಮರು ಆಯ್ಕೆಯಾದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯ ಸಭೆಯಲ್ಲಿರುವ ತನ್ನ ಪಕ್ಷದ ನಾಯಕ ಆರ್.ಸಿ.ಪಿ. ಸಿಂಗ್‌ಗಾಗಿ ಹುದ್ದೆ ತ್ಯಜಿಸಿದ್ದರು.

ಸರಕಾರಿ ಅಧಿಕಾರಿಯಾಗಿದ್ದು, ಅನಂತರ ರಾಜಕೀಯ ಪ್ರವೇಶಿಸಿದ್ದ ಆರ್.ಸಿ.ಪಿ. ಸಿಂಗ್ ಇದುವರೆಗೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News