ಉಡುಪಿ ಗ್ರಾ.ಪಂ. ಚುನಾವಣೆ : 2 ಹಂತಗಳಲ್ಲಿ ಒಟ್ಟು 583342 ಮಂದಿ ಹಕ್ಕು ಚಲಾವಣೆ

Update: 2020-12-28 16:28 GMT

ಉಡುಪಿ, ಡಿ.28: ಉಡುಪಿ ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ನಡೆದ ಗ್ರಾಪಂ ಚುನಾವಣೆಯಲ್ಲಿ ಒಟ್ಟು ಏಳು ತಾಲೂಕುಗಳ ಪೈಕಿ ಹೆಬ್ರಿ ತಾಲೂಕಿ ನಲ್ಲಿ ಅತಿಹೆಚ್ಚು ಶೇ.79.41 ಮತ್ತು ಅತಿ ಕಡಿಮೆ ಬೈಂದೂರು ತಾಲೂಕಿನಲ್ಲಿ ಶೇ.71.28 ಮತದಾನ ಆಗಿದೆ.

ಜಿಲ್ಲೆಯ ಎರಡು ಹಂತಗಳಲ್ಲಿ ಒಟ್ಟು ಏಳು ತಾಲೂಕುಗಳ 153 ಗ್ರಾಪಂ ಗಳಲ್ಲಿ ಒಟ್ಟು 1166 ಮತಗಟ್ಟೆಗಳ ಪೈಕಿ 1136 ಮತಗಟ್ಟೆಗಳಲ್ಲಿ 7,80,090 (ಪು-3,75,683, ಮ-4,04,397, ಇ-10) ಮತದಾರರ ಪೈಕಿ 5,83,342 (ಪು-2,73,080, ಮ-3,10,259, ಇ-3) ಮತ ದಾರರು ಮತದಾನ ಮಾಡುವ ವುೂಲಕ ಶೇ.74.78 ಮತದಾನ ಆಗಿದೆ.

ಎರಡನೇ ಹಂತದಲ್ಲಿ ಜಿಲ್ಲೆಯ ಕಾರ್ಕಳ, ಕುಂದಾಪುರ, ಕಾಪು ತಾಲೂಕುಗಳ ತಾಲೂಕುಗಳಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 4,10,809 (ಪುರುಷರು- 1,97,058, ಮಹಿಳೆಯರು -2,13,746, ಇತರರು-5) ಮತದಾರರ ಪೈಕಿ 3,09,842 (ಪು-1,44,327, ಮ-1,65,514, ಇ-1)ಮಂದಿ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಶೇ.75.42 ಮತದಾನ ಆಗಿದೆ.

ಕುಂದಾಪುರ ತಾಲೂಕಿನಲ್ಲಿ 1,86,685(ಪು-90339, ಮ-96343, ಇ-3) ಮತದಾರರ ಪೈಕಿ 142039(ಪು-65909, ಮ-76129, ಇ-1) ಮಂದಿ, ಕಾರ್ಕಳ ತಾಲೂಕಿನಲ್ಲಿ 1,28,357(ಪು- 61256, ಮ-67101) ಮತದಾರರಲ್ಲಿ 97825(ಪು-46205, ಮ-51620) ಮಂದಿ, ಕಾಪು ತಾಲೂಕಿನಲ್ಲಿ 95767(ಪು-45463, ಮ-50302, ಇ-2) ಮತದಾರರ ಪೈಕಿ 69978(ಪು-32213, ಮ-37765) ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಮತ ಎಣಿಕೆ ಕೇಂದ್ರ ಸುತ್ತ ನಿಷೇಧಾಜ್ಞೆ

ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಉಡುಪಿ ಜಿಲ್ಲೆಯ ಗ್ರಾಪಂ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ನಡೆಯುವ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144ರನ್ವಯ ಡಿ.30ರ ಬೆಳಗ್ಗೆ 6ಗಂಟೆಯಿಂದ 31ರ ಬೆಳಗ್ಗೆ 6ಗಂಟೆಯ ವರೆಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಉಡುಪಿ ಜಿಲ್ಲಾಧಿ ಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.

ಮತ ಎಣಿಕೆ ಕೇಂದ್ರಗಳಾದ ಉಡುಪಿ ಬ್ರಹ್ಮಗಿರಿ ಸೈಂಟ್ ಸಿಸಿಲಿಸ್ ಶಾಲೆ, ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜು, ಬ್ರಹ್ಮಾವರ ಎಸ್‌ಎಂಎಸ್ ಪದವಿ ಪೂರ್ವ ಕಾಲೇಜು, ಕುಂದಾಪುರ ಭಂಡಾಕಾರ್ಸ್‌ ಕಾಲೇಜು, ಕಾರ್ಕಳ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜುಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಈ ಅವಧಿಯಲ್ಲಿ ಯಾವುದೇ ರೀತಿಯ ಸಾರ್ವಜನಿಕ ಮೆರವಣಿಗೆ, ವಿಜಯೋತ್ಸವ, ಪ್ರತಿಭಟನಾ ಮೆರವಣಿಗೆ ಅಂಗವಾಗಿ ಸಾರ್ವಜನಿಕ ಸಭೆ ಸಮಾರಂಭಗಳನ್ನು ನಿಷೇಧಿಸಲಾಗಿದೆ. ಫಲಿತಾಂಶ ಪ್ರಕಟಣೆಯ ನಂತರ ಗೆದ್ದ ಹಾಗೂ ಸೋತ ಅಭ್ಯರ್ಥಿಗಳು ಅಥವಾ ಕಾರ್ಯಕರ್ತರುಗಳು ಯಾವುದೇ ರೀತಿಯ ಘೋಷಣೆ ಅಥವಾ ಮೆರವಣಿಗೆ ನಡೆಸುವುದನ್ನು ನಿಷೇಧಿಸಿದೆ. ಯಾವುದೇ ಆಯುಧ ಅಥವಾ ದೈಹಿಕ ಹಿಂಸೆಗೆ ಕಾರಣ ವಾಗುವ ಅಥವಾ ಪೂರಕವಾಗುವ ವಸ್ತುಗಳನ್ನು ಹೊಂದುವುದು ಮತ್ತು ಸಾಗಾಟ ಮಾಡುವುದನ್ನು ನಿಷೇಧಿಸಿದೆ.

ಸರಕಾರದಿಂದ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ, ಸಭೆ ಸಮಾರಂಭ ಗಳಿಗೆ ಇದು ಅನ್ವಯಿಸುವುದಿಲ್ಲ. ಚುನಾವಣಾ ಮತ ಎಣಿಕ ಕರ್ತವ್ಯದಲ್ಲಿ ನಿರತರಾಗಿರುವ ಸಿಬ್ಬಂದಿಗಳು ಅವರ ಚುನಾವಣಾ ಮತ ಎಣಿಕೆ ಕರ್ತವ್ಯ ನಿರ್ವಹಿಸುವ ಸ್ಥಳಕ್ಕೆ ಅನ್ವಯಿಸುವುದಿಲ್ಲ. ಗುರುತಿನ ಚೀಟಿಯೊಂದಿಗೆ ಮತ ದಾನ ಎಣಿಕೆ ಕೇಂದ್ರಗಳಿಗೆ ಬರುವ ಚುನಾವಣೆ ಅಭ್ಯರ್ಥಿ ಹಾಗೂ ಎಣಿಕೆ ಏಜೆಂಟರುಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News