ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಕುಗ್ಗಲಿದೆ: ವಿಶ್ವಸಂಸ್ಥೆ ವರದಿ

Update: 2020-12-29 17:03 GMT

ವಿಶ್ವಸಂಸ್ಥೆ,ಡಿ.29: ಭಾರತದ ಆರ್ಥಿಕತೆಯು ದಕ್ಷಿಣ ಹಾಗೂ ನೈಋತ್ಯ ಏಶ್ಯಾ ಪ್ರದೇಶದ ರಾಷ್ಟ್ರಗಳಲ್ಲೇ ಅತ್ಯಂತ ಸ್ಥಿತಿಸ್ಥಾಪಕತ್ವವುಳ್ಳದಾಗಿದೆ ಎಂದು ಮಂಗಳವಾರ ಬಿಡುಗಡೆಯಾದ ವಿಶ್ವಸಂಸ್ಥೆಯ ವರದಿಯೊಂದುತಿಳಿಸಿದೆ. ಕೊರೋನ ವೈರಸ್ ಹಾವಳಿಯ ಕಾರಣದಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ವಾಣಿಜ್ಯವು ಅತ್ಯಂತ ಕೆಟ್ಟದಾಗಿ ಕುಗ್ಗುವಿಕೆಯನ್ನು ಕಾಣಲಿದೆಯೆಂದು, ವಿಶ್ವಸಂಸ್ಥೆ ‘ ವಿದೇಶಿ ನೇರ ಹೂಡಿಕೆ ಪ್ರವೃತ್ತಿಗಳು ಏಶ್ಯ ಹಾಗೂ ಪೆಸಿಫಿಕ್ ಪ್ರದೇಶಗಳ ಹೊರನೋಟ 2020/2021’ ವರದಿ ತಿಳಿಸಿದೆ.

ಆದರೆ ವಿಮೆ, ಕಲ್ಲಿದ್ದಲು ಹಾಗೂ ರಕ್ಷಣಾ ವಲಯಗಳಲ್ಲಿ ವಿದೇಶಿ ನೇರಹೂಡಿಕೆಗೆ ಇರುವ ನಿರ್ಬಂಧಗಳನ್ನು ಸಡಿಲುಗೊಳಿಸುವ ಭಾರತದ ಇತ್ತೀಚಿನ ನೀತಿಗಳಿಂದಾಗಿ ವಿದೇಶಿ ಹೂಡಿಕೆಯಲ್ಲಿ ಏರುಗತಿ ಕಂಡುಬಂದಿದೆಯೆಂದು ವರದಿ ಹೇಳಿದೆ.

 ಭಾರತದಲ್ಲಿ ಟೆಲಿಕಾಂ ಹಾಗೂ ಡಿಜಿಟಲ್ ಕ್ಷೇತ್ರಗಳು ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದ ಬಂಡವಾಳ ಹೂಡಿಕೆ ಕಂಪೆನಿಗಳು ಹಾಗೂ ತಂತ್ರಜ್ಞಾನ ಸಂಸ್ಥೆಗಳು ದೇಶದ ಮಾರುಕಟ್ಟೆಯ ಬಗ್ಗೆ ಆಸಕ್ತಿಯನ್ನು ತೋರಿಸುತ್ತಿವೆ ಎಂದು ವರದಿ ಹೇಳಿದೆ. ಜಾಗತಿಕ ತಂತ್ರಜ್ಞಾನ ಸಂಸ್ಥೆಗಳಾದ ಗೂಗಲ್ ಹಾಗೂ ಫೇಸ್‌ಬುಕ್, ರಿಲಾಯನ್ಸ್‌ನ ಜಿಯೋ ಕಂಪೆನಿಯ ಮೂಲಕ ಹೂಡಿಕೆಗಳನ್ನು ಮಾಡುತ್ತಿರುವುದನ್ನು ವರದಿಯಲ್ಲಿ ಪ್ರಸ್ತಾವಿಸಲಾಗಿದೆ.

 ಕಳೆದ ವರ್ಷಕ್ಕೆ ಹೋಲಿಸಿದರೆ 2020ರಲ್ಲಿ ಭಾರತದಲ್ಲಿ ಆಮದಿನ ಪ್ರಮಾಣವು ಶೇ.23.6ಕ್ಕೆ ಕುಸಿದಿದೆ. ಇದರ ಜೊತೆಗೆ ಜಿಡಿಪಿಯಲ್ಲೂ ತೀವ್ರ ಕುಸಿತವುಂಟಾಗಿದೆ. ಜುಲೈ-ಸೆಪ್ಟೆಂಬರ್ ತಿಂಗಳ ದ್ವಿತೀಯ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಶೇ.7.5ಕ್ಕೆ ಕುಗ್ಗಿದ್ದರೆ, ಮೊದಲ ತ್ರೈಮಾಸಿಕ (ಎಪ್ರಿಲ್-ಜೂನ್)ದಲ್ಲಿ ಆರ್ಥಿಕತೆಯು ಶೇ. 23.9ರಷ್ಟು ಅಭೂತಪೂರ್ವ ಕುಸಿತವನ್ನು ಕಂಡಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News