×
Ad

ಸಿಗರೇಟ್‍ಗೆ ಹಣ ಕೇಳಿದ ಎಂದು ಅಂಗಡಿಯಾತನನ್ನು ಕಾರು ಹತ್ತಿಸಿ ಕೊಂದ ಕಾನ್‍ಸ್ಟೇಬಲ್

Update: 2020-12-31 22:24 IST

ಡೆಹ್ರಾಡೂನ್: ತಾನು ಖರೀದಿಸಿದ ಸಿಗರೇಟ್‍ಗೆ ಹಣ ನೀಡುವಂತೆ ಅಂಗಡಿಯಾತ ಹೇಳಿದ್ದರಿಂದ ಸಿಟ್ಟುಗೊಂಡ ಪೊಲೀಸ್ ಕಾನ್‍ಸ್ಟೇಬಲ್ ಒಬ್ಬ ಆ 28 ವರ್ಷದ ಅಂಗಡಿ ಮಾಲಕನನ್ನು ತನ್ನ ಕಾರಿನಡಿಗೆ ಬೀಳಿಸಿ ಸಾಯಿಸಿದ ಆಘಾತಕಾರಿ ಘಟನೆ ಯು ಎಸ್ ನಗರ್ ಜಿಲ್ಲೆಯ ಬಝ್ಪುರ್ ಪ್ರದೇಶದಿಂದ ಬುಧವಾರ ವರದಿಯಾಗಿದೆ.

ಅಂಗಡಿ ಮಾಲಕ ಗೌರವ್ ರೋಹೆಲ್ಲ ಎಂಬಾತನನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಅದಾಗಲೇ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದ್ದಾರೆ. ಘಟನೆ ನಂತರ ಗೌರವ್ ಕುಟುಂಬ ಸದಸ್ಯರು ಹಾಗೂ ಸ್ಥಳೀಯರು ದೊಡ್ಡ ಸಂಖ್ಯೆಯಲ್ಲಿ ಬಝ್ಪುರ್ ಪೊಲೀಸ್ ಠಾಣೆಯೆದರು ಜಮಾಯಿಸಿ ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಘಟನೆ ನಡೆದ ತಕ್ಷಣ ತಲೆಮರೆಸಿಕೊಂಡಿದ್ದ ಕಾನ್‍ಸ್ಟೇಬಲ್ ಮತ್ತಾತನ ಇಬ್ಬರು ಸಹವರ್ತಿಗಳನ್ನು ಗುರುವಾರ ಬೆಳಗ್ಗೆ ಬಂಧಿಸಲಾಗಿದೆ. ಆರೋಪಿಗಳನ್ನು ಕಾನ್‍ಸ್ಟೇಬಲ್ ಪ್ರವೀಣ್ ಕುಮಾರ್, ಆತನ ಭಾವ ಜೀವನ್ ಕುಮಾರ್ ಹಾಗೂ ಗೌರವ್ ರಾಥೋರ್ ಎಂದು ಗುರುತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News