ಕುಪ್ಪೆಪದವು ಗ್ರಾಪಂ ಜೆಡಿಎಸ್ ತೆಕ್ಕೆಗೆ

Update: 2021-01-01 18:02 GMT

ಮಂಗಳೂರು, ಜ.1: ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮ ವ್ಯಾಪ್ತಿಯನ್ನು ಒಳಗೊಂಡ ಕುಪ್ಪೆಪದವು ಗ್ರಾಪಂ ಜೆಡಿಎಸ್ ಒಲಿದಿದೆ.
ದ.ಕ.ಜಿಲ್ಲೆಯಲ್ಲೇ ಜೆಡಿಎಸ್ 2ನೇ ಬಾರಿಗೆ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವ ಏಕೈಕ ಗ್ರಾಪಂ ಕುಪ್ಪೆಪದವು ಆಗಿದೆ. ಒಟ್ಟು 9 ಸ್ಥಾನಗಳ ಪೈಕಿ 6 ಸ್ಥಾನಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ.

ಈ ಮೂಲಕ ಜೆಡಿಎಸ್ ಮುಖಂಡ ಡಿಪಿ ಹಮ್ಮಬ್ಬ ಸಾರಥ್ಯದಲ್ಲಿ ಜೆಡಿಎಸ್ ಅಭ್ಯರ್ಥಿಗಳಾದ ಕೆ.ರಫೀಕ್ (425 ಮತ), ಪುಷ್ಪಾ (385 ಮತ), ಮುಹಮ್ಮದ್ ಶರೀಫ್ ಕಜೆ (284 ಮತ), ವಿನೋದಾ- (198 ಮತ), ವಿಮಲಾ ಗಿರಿಧರ್ (198 ಮತ),ಡಿಪಿ ಹಮ್ಮಬ್ಬ (513) ಮತ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News