ಬಲವಂತದ ಮತಾಂತರ ತಡೆ ಕಾನೂನು ಜಾರಿಗೊಳಿಸಲು ಸಿದ್ಧವಾಗುತ್ತಿರುವ ಗುಜರಾತ್

Update: 2021-01-02 07:26 GMT

ಗಾಂಧಿನಗರ್,ಜ.02: ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ರಾಜ್ಯ ಸರಕಾರಗಳು `ಲವ್ ಜಿಹಾದ್' ತಡೆಗಟ್ಟುವ ಉದ್ದೇಶದಿಂದ ಬಲವಂತದ ಮತಾಂತರ ತಡೆ ಕಾಯಿದೆಯನ್ನು ಜಾರಿಗೊಳಿಸಿದ ಬೆನ್ನಿಗೆ  ಗುಜರಾತ್ ಸರಕಾರ ಕೂಡ ಪ್ರೀತಿ ಮತ್ತು ವಿವಾಹದ ನೆಪದಲ್ಲಿ ಬಲವಂತದ ಧಾರ್ಮಿಕ ಮತಾಂತರ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳುವ ಉದ್ದೇಶದಿಂದ ಕಾನೂನು ಜಾರಿಗೊಳಿಸಲು ಚಿಂತನೆ ನಡೆಸುತ್ತಿದೆ.

ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ 2003ರ  ಒಂದು ಉದ್ದೇಶ ಬಲವಂತದ ಹಾಗೂ ವಂಚನೆ ಮೂಲಕ ನಡೆಸುವ ಮತಾಂತರದ ತಡೆಯಾಗಿದ್ದರೂ ರಾಜ್ಯ ಸರಕಾರ ಈ ಕಾನೂನನ್ನು ಇನ್ನಷ್ಟು ಬಲಪಡಿಸಬಹುದು ಅಥವಾ ಬೇರೆಯೇ ಆದ ಹೊಸ ಕಾನೂನು ಜಾರಿಗೊಳಿಸಬಹುದಾಗಿದೆ.

ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ರಾಜ್ಯ ಸರಕಾರಗಳು ಜಾರಿಗೊಳಿಸಿದ ನೂತನ ಕಾನೂನುಗಳನ್ನು ಪರಾಮರ್ಶಿಸುವಂತೆ ಗುಜರಾತ್ ಸರಕಾರ ಈಗಾಗಲೇ ತನ್ನ ಗೃಹ, ಕಾನೂನು, ಶಾಸಕಾಂಗ ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯಗಳಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News