ಮುಂಬೈ ದಾಳಿಯ ರೂವಾರಿ, ಎಲ್‌ಇಟಿ ಮುಖಂಡ ಲಖ್ವಿ ಪಾಕಿಸ್ತಾನದಲ್ಲಿ ಸೆರೆ

Update: 2021-01-02 13:41 GMT

ಲಾಹೋರ್‌,ಜ.2: ಮುಂಬೈಯಲ್ಲಿ ನಡೆದಿದ್ದ ದಾಳಿಯ ಪ್ರಮುಖ ರೂವಾರಿ ಮತ್ತು ಭಯೋತ್ಪಾದಕ ಸಂಘಟನೆ ಲಷ್ಕರ್-ಏ- ತೊಯ್ಬಾ ಮುಖಂಡ ಝಕೀಉರ್ರಹ್ಮಾನ್‌ ಲಖ್ವಿಯನ್ನು ಪಾಕಿಸ್ತಾನದಲ್ಲಿ ಪೊಲೀಸರು ಬಂಧಿಸಿದ್ದಾಗಿ timesofindia.com ವರದಿ ಮಾಡಿದೆ. ಭಯೋತ್ಪಾದನ ಕೃತ್ಯ ನಡೆಸಲು ಹಣಕಾಸಿನ ನೆರವು ನೀಡಿದ್ದಕ್ಕಾಗಿ ಆತನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಲಖ್ವಿಯನ್ನು ಯಾವ ಸ್ಥಳದಿಂದ ಬಂಧಿಸಲಾಗಿದೆ ಅನ್ನುವ ಕುರಿತು ಪೊಲೀಸರು ಇದುವರೆಗೂ ಮಾಹಿತಿ ನೀಡಿಲ್ಲ ಎನ್ನಲಾಗಿದೆ. 2015ರಲ್ಲಿ ಆತ ಜಾಮೀನಿನ ಮೇರೆಗೆ ಹೊರಬಂದ ಬಳಿಕ ಇದೇ ಪ್ರಥಮ ಬಾರಿಗೆ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಭಯೋತ್ಪಾದನಾ ಕೃತ್ಯಗಳನ್ನು ನಡೆಸುವ ಸಲುವಾಗಿ ಆತ ಔಷಧಾಲಯಗಳನ್ನು ತೆರೆದು ಅದರ ಮೂಲಕ ಹಣ ಸಂಗ್ರಹಿಸುತ್ತಿದ್ದ ಎಂದು ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News