×
Ad

ಸೌರವ್ ಗಂಗುಲಿ ಆರೋಗ್ಯ ಸ್ಥಿರ, ವೈದ್ಯರಿಂದ ನಿರಂತರ ನಿಗಾ

Update: 2021-01-03 12:45 IST

ಕೋಲ್ಕತಾ: ಶನಿವಾರ ಲಘು ಹೃದಯಾಘಾತವಾದ ಬಳಿಕ ಆ್ಯಂಜಿಯೋಪ್ಲಾಸ್ಟಿಗೆ ಒಳಗಾಗಿರುವ ಬಿಸಿಸಿಐ ಅಧ್ಯಕ್ಷ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗುಲಿಯವರ ಆರೋಗ್ಯ ಸ್ಥಿರವಾಗಿದೆ ಎಂದು ರವಿವಾರ ಕೋಲ್ಕತಾದ ವುಡ್‍ಲ್ಯಾಂಡ್ಸ್ 
ಆಸ್ಪತ್ರೆಯ ಬಿಡುಗಡೆ ಮಾಡಿದ ಹೆಲ್ತ್  ಬುಲೆಟಿನ್ ನಲ್ಲಿ ತಿಳಿಸಿದೆ.
ರವಿವಾರ ಬೆಳಗ್ಗೆ ನಿಯಮಿತ ಇಸಿಜಿಯನ್ನು ಮಾಡಲಾಗಿದೆ. ಚಿಕಿತ್ಸೆ ನೀಡುವ ವೈದ್ಯರು ಬಿಸಿಸಿಐ ಮುಖ್ಯಸ್ಥ ಗಂಗುಲಿ ಆರೋಗ್ಯ ಪರಿಸ್ಥಿತಿಯ ಬಗ್ಗೆ ನಿರಂತರ ಜಾಗರೂಕತೆ ವಹಿಸುತ್ತಿದ್ದಾರೆ ಹಾಗೂ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಬುಲೆಟಿನ್ ತಿಳಿಸಿದೆ.
ಗಂಗುಲಿಯವರಿಗೆ ಶನಿವಾರ ಬೆಳಗ್ಗೆ 11 ಗಂಟೆಗೆ ಮನೆಯ ವ್ಯಾಯಾಮ ಶಾಲೆಯಲ್ಲಿ ವ್ಯಾಯಾಮದಲ್ಲಿ ತೊಡಗಿದ್ದಾಗ ಎದೆ ನೋವು, ತಲೆ ಭಾರ, ವಾಂತಿ ಹಾಗೂ ತಲೆಸುತ್ತುವಿಕೆಯಿಂದ ಬಳಲಿದ ಕಾರಣ ಶನಿವಾರ ಮಧ್ಯಾಹ್ನ 1 ಗಂಟೆಗೆ ವುಡ್ ಲ್ಯಾಂಡ್ಸ್ ಆಸ್ಪತ್ರಗೆಗೆ ತುರ್ತು ವಿಭಾಗಕ್ಕೆ ಕರೆದೊಯ್ಯಲಾಗಿತ್ತು. 
ಗಂಗುಲಿಗೆ ಕೊರೋನ ವೈರಸ್ ಪರೀಕ್ಷೆ ಮಾಡಲಾಗಿದ್ದು, ವರದಿ ನೆಗಟಿವ್ ಆಗಿತ್ತು.  
ಗಂಗುಲಿ 2019ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದರು. 2020ರಲ್ಲಿ ಯುಎಇಯಲ್ಲಿ ಐಪಿಎಲ್ ಆಯೋಜಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News