ಟೀಂ ಇಂಡಿಯಾ ಕ್ರಿಕೆಟಿಗರ ಬಿಲ್‌ ನಲ್ಲಿ ʼಬೀಫ್‌ʼ ಪತ್ತೆ?: ಸಾಮಾಜಿಕ ಜಾಲತಾಣ ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತೇ?

Update: 2021-01-03 12:16 GMT

ಮೆಲ್ಬೋರ್ನ್‌,ಜ.03: ಭಾರತೀಯ ಕ್ರಿಕೆಟ್‌ ತಂಡದ ಪ್ರಮುಖ ಆಟಗಾರರಾದ ರೋಹಿತ್‌ ಶರ್ಮಾ, ನವದೀಪ್‌ ಸೈನಿ, ಶುಭ್‌ ಮನ್‌ ಗಿಲ್‌, ಪೃಥ್ವಿ ಶಾ ಹಾಗೂ ರಿಶಬ್‌ ಪಂತ್‌ ಕ್ರಿಕೆಟ್‌ ಆಸ್ಟ್ರೇಲಿಯಾದ ನಿಯಮವನ್ನು ಉಲ್ಲಂಘಿಸಿ ಹೊಸ ವರ್ಷದಂದು ರೆಸ್ಟೋರೆಂಟ್‌ ಗೆ ತೆರಳಿ ಆಹಾರ ಸೇವಿಸಿದ್ದರು. ಪಕ್ಕದಲ್ಲೇ ಕುಳಿತಿದ್ದ ಅಭಿಮಾನಿಯೋರ್ವರು ಆಟಗಾರರ ವೀಡಿಯೋ ಮಾಡಿ ಟ್ವಿಟರ್‌ ನಲ್ಲಿ ಪೋಸ್ಟ್‌ ಮಾಡಿದ್ದು ವ್ಯಾಪಕ ವೈರಲ್‌ ಆಗಿತ್ತು.

ವೀಡಿಯೋ ಮಾಡಿ ಪ್ರಕಟಿಸಿದ್ದಲ್ಲದೇ ಆಟಗಾರರ ಆಹಾರದ ಬಿಲ್‌ ಅನ್ನು ಕೂಡಾ ಪಾವತಿಸಿದ್ದರು. ಈ ಐದು ಆಟಗಾರರು ಸದ್ಯ ಐಸೋಲೇಶನ್‌ ನಲ್ಲಿದ್ದರೂ, ಅವರ ಬಿಲ್‌ ನಲ್ಲಿದ್ದ ಬೀಫ್‌ ಸದ್ಯ ಸುದ್ದಿಯಾಗುತ್ತಿದೆ. ಭಾರತದ ಹಲವು ರಾಜ್ಯಗಳಲ್ಲಿ ಬೀಫ್‌ ಬ್ಯಾನ್‌ ಆಗುತ್ತಿರುವ ಕಾರಣ ಆಟಗಾರರು ಆಸ್ಟ್ರೇಲಿಯಾಕ್ಕೆ ತೆರಳಿ ಬೀಫ್‌ ಸೇವಿಸುತ್ತಿದ್ದಾರೆ ಎಂದು ವ್ಯಕ್ತಿಯೋರ್ವರು ಸಾಮಾಜಿಕ ತಾಣದಲ್ಲಿ ಕುಹಕವಾಡಿದ್ದಾರೆ.

ನವಲ್‌ ದೀಪ್‌ ಸಿಂಗ್‌ ಎಂಬ ಅಭಿಮಾನಿ ಬಿಲ್‌ ನ ಫೋಟೊ ಶೇರ್‌ ಮಾಡುವ ವೇಳೆ ಬೀಫ್‌ ಮತ್ತು ಪೋರ್ಕ್‌ ಅನ್ನು ಮರೆಮಾಚಿದ್ದರು. ಆದರೆ ಪೂರ್ತಿ ಬಿಲ್‌ ನ ಫೋಟೊ ಸಾಮಾಜಿಕ ತಾಣದಾದ್ಯಂತ ಹರಿದಾಡುತ್ತಿದೆ. ಸದ್ಯ ಈ ಬಿಲ್‌ ವಿವಾದಕ್ಕೀಡಾಗಿದ್ದು, ಸಂಪೂರ್ಣ ಸತ್ಯಾಸತ್ಯತೆಯ ಕುರಿತು ಇನ್ನೂ ತಿಳಿದು ಬಂದಿಲ್ಲ. ಸದ್ಯ ಪರ ವಿರೋಧ ಚರ್ಚೆಗಳ ನಡುವೆ ಭಾರತೀಯ ಕ್ರಿಕೆಟ್‌ ಮಂಡಳಿ ಮತ್ತು ಆಟಗಾರರ ಹೇಳಿಕೆಗಳು ಇನ್ನೂ ಕೇಳಿ ಬಂದಿಲ್ಲ ಎಂದು ತಿಳಿದು ಬಂದಿದೆ.

ಟ್ವೀಟ್‌ ಗಳು ಈ ಕೆಳಗಿನಂತಿವೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News