ರಕ್ಷಣಾ ಹಗರಣ:ಅಮೆರಿಕದ ಕಂಪೆನಿ, ಡಿಆರ್‌ಡಿಒದ ಮಾಜಿ ವಿಜ್ಞಾನಿ ವಿರುದ್ಧ ಸಿಬಿಐ ದೋಷಾರೋಪ

Update: 2021-01-04 16:41 GMT

ಹೊಸದಿಲ್ಲಿ,ಜ.4: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಗಾಗಿ 2007ರಲ್ಲಿ 35 ರೇಡಿಯೊ ಫ್ರೀಕ್ವೆನ್ಸಿ ಜನರೇಟರ್‌ಗಳ ಖರೀದಿಯಲ್ಲಿ ಅಕ್ರಮಗಳಿಗಾಗಿ ಅಮೆರಿಕದ ಕಂಪೆನಿ ಎಕಾನ್ ಇಂಕ್ ಮತ್ತು ಆಗ ಡಿಆರ್‌ಡಿಒದಲ್ಲಿ ವಿಜ್ಞಾನಿಯಾಗಿದ್ದ ಪ್ರಿಯಾ ಸುರೇಶ ವಿರುದ್ಧ ಸಿಬಿಐ ದೋಷಾರೋಪವನ್ನು ಹೊರಿಸಿದೆ.

10,80,450 ಡಾ.ವೆಚ್ಚದಲ್ಲಿ ಈ ಜನರೇಟರ್‌ಗಳನ್ನು ಖರೀದಿಸಲಾಗಿತ್ತು.

2009,ಫೆಬ್ರವರಿಯಲ್ಲಿ ಮೂರು ಕಂತುಗಳಲ್ಲಿ 35 ಜನರೇಟರ್‌ಗಳು ಡಿಆರ್‌ಡಿಒಗೆ ತಲುಪಿದ್ದವು. ಅವುಗಳನ್ನು ಪೂರೈಸಿದ್ದ ಎಕಾನ್ ಶೇ.90ರಷ್ಟು ಹಣಪಾವತಿಯನ್ನು ಸ್ವೀಕರಿಸಿತ್ತು.

ಪೂರೈಕೆಯಾದ ಕೆಲವೇ ವಾರಗಳಲ್ಲಿ 23 ಜನರೇಟರ್‌ಗಳನ್ನು ರಿಪೇರಿ ಮತ್ತು ಉನ್ನತೀಕರಣದ ಹೆಸರಿನಲ್ಲಿ ಅಮೆರಿಕಕ್ಕೆ ವಾಪಸ್ ಕಳುಹಿಸಲಾಗಿತ್ತು. ಕಂಪನಿಯು ಈವರೆಗೆ ಸಂಪೂರ್ಣ ಕಾರ್ಯಸಮರ್ಥ ಜನರೇಟರ್‌ಗಳನ್ನು ಒದಗಿಸಿಲ್ಲ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News