ರೈತ ಹೋರಾಟ ಬೆಂಬಲಿಸಿ ‘ಮಹಿಳಾ ಕಾಂಗ್ರೆಸ್ ನಡಿಗೆ, ಅನ್ನದಾತನ ಬಳಿಗೆ’ ವಿಶಿಷ್ಟ ಕಾರ್ಯಕ್ರಮ

Update: 2021-01-05 14:32 GMT

ಕೋಟ, ಜ.5: ಜಿಲ್ಲಾ ಮಹಿಳಾ ಕಾಂಗ್ರೆಸ್ ಹಾಗೂ ಕೋಟ ಬ್ಲಾಕ್ ಮಹಿಳಾ ಕಾಂಗ್ರೆಸ್‌ಗಳ ಜಂಟಿ ಆಶ್ರಯದಲ್ಲಿ ಮಹಿಳಾ ಕಾಂಗ್ರೆಸ್ ನಡಿಗೆ, ಅನ್ನದಾತನ ಬಳಿಗೆ ಎಂಬ ವಿನೂತನ ಕಾರ್ಯಕ್ರಮವನ್ನು ಕೋಟ ಬ್ಲಾಕ್‌ನ ಶೀರೂರು ಗ್ರಾಮದ ಶೀನ ನಾಯ್ಕ ಹಾಗೂ ಶಿವ ನಾಯ್ಕ ಅವರ ಹೊಲದಲ್ಲಿ ಇಂದು ಆಯೋಜಿಸಲಾಗಿತ್ತು.

ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾಅಮರನಾಥ್ ಮಾತನಾಡಿ, ಕೇಂದ್ರ ಸರಕಾರವು ಮೂರು ಕೃಷಿ ಮಸೂದೆಗಳನ್ನು ತರಲು ಹೊರಟಿದ್ದು, ಇದನ್ನು ಪ್ರತಿಭಟಿಸುವ ನಿಟ್ಟಿನಲ್ಲಿ ಸಾವಿರಾರು ರೈತರು ದೆಹಲಿ ಯಲ್ಲಿ ಹೋರಾಟಕ್ಕೆ ಇಳಿದಿದ್ದಾರೆ. ಈ ರೈತರಿಗೆ ಬೆಂಬಲ ನೀಡುವ ಉದ್ದೇಶ ದಿಂದ ರಾಜ್ಯಾದಾದ್ಯಂತ ಎಲ್ಲಾ ಜಿಲ್ಲೆ ಗಳಲ್ಲೂ ಮಹಿಳಾ ಕಾಂಗ್ರೆಸ್ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದೆ. ನಮ್ಮ ಹಸಿವನ್ನು ನೀಗಿಸಲು ಹಗಲು ರಾತ್ರಿ ಶ್ರಮಿಸುವ ರೈತರು ನಮಗೆಲ್ಲಾ ಅನ್ನದಾತರು ಎಂದರು.

ಅನ್ನದಾತನಿಗೆ ಶ್ರಮದಾನ ಮತ್ತು ಸನ್ಮಾನ ಕಾರ್ಯಕ್ರಮದನ್ವಯ ಇಬ್ಬರೂ ರೈತರ ಹೊಲಗಳಿಗೆ ತೆರಳಿದ ಮಹಿಳಾ ಕಾಂಗ್ರೆಸ್ ಸದಸ್ಯರು, ರೈತರು ಬೆಳೆಸಿರುವ ತರಕಾರಿ ಬೆಳೆಗಳನ್ನು ಕೊಯ್ಯುವ ಮೂಲಕ ಶ್ರಮದಾನವನ್ನು ನಡೆಸಿ, ಈ ಎರಡೂ ರೈತ ಕುಟುಂಬಗಳನ್ನು ಸೀರೆ, ಧೋತಿ, ಶಾಲು, ಫಲ ಪುಷ್ಪಗಳನ್ನು ನೀಡಿ ಸನ್ಮಾನಿಸಿದರು. ತಾವು ಕೊಯ್ದ ತರಕಾರಿಗಳನ್ನು ತಾವೇ ಖರೀದಿಸುವ ಮೂಲಕ ರೈತರಿಗೆ ಬೆಂಬಲ ನೀಡಿದರು. ಇದೇ ವೇಳೆ ರೈತ ಕುಟುಂಬ ದೊಂದಿಗೆ ಸಹಭೋಜನವೂ ನಡೆಯಿತು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಸುಮಾ ಕಾಮತ್ ಸ್ವಯಂ ರಚಿಸಿದ ರೈತಗೀತೆ ಹಾಡಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕಾರಣಿ ಸಮಿತಿಯ ನೂತನ ಪದಾಧಿಕಾರಿ ಗಳಿಗೆ ಆದೇಶ ಪತ್ರವನ್ನು ನೀಡಿ ಅಭಿ ನಂದಿಸಲಾಯಿತು. ಕೋಟ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ ವಂದಿಸಿದರು.

ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ಉಪಾಧ್ಯಕ್ಷ ಕಿಶೋರ್ ಶೆಟ್ಟಿ, ವೈ.ಬಿ.ರಾಘವೇಂದ್ರ, ಸುರೇಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಸ್ತುವಾರಿ ಸುರೇಖಾ ಚಂದ್ರಹಾಸ, ಮಂಗಳೂರಿನ ಮಾಜಿ ಕಾರ್ಪೊರೇಟರ್ ಅಪ್ಪಿ, ವೆರೋನಿಕಾ ಕರ್ನೇಲಿಯೋ, ಡಾ.ಸುನೀತಾ ಶೆಟ್ಟಿ, ರೋಶನಿ ಒಲಿವರ್, ಮೀನಾಕ್ಷಿ ಮಾಧವ ಬನ್ನಂಜೆ, ಸರಸು.ಡಿ.ಬಂಗೇರಾ, ಶಾಂತಿ ಪಿರೇರಾ, ಜ್ಯೋತಿ ಹೆಬ್ಬಾರ್, ಪ್ರಭಾವತಿ ಸಾಲಿಯಾನ್, ಆಗ್ನೇಸ್ ಡೇಸಾ, ಪ್ರೆಸಿಲ್ಲಾ ಡಿಮೆಲ್ಲೋ, ಬ್ಲಾಕ್ ಅಧ್ಯಕ್ಷ ಪ್ರಭಾ ಶೆಟ್ಟಿ, ಸಂಧ್ಯಾ ಶೆಟ್ಟಿ, ಗೋಪಿ.ಕೆ.ನಾಯ್ಕ್, ಜೇಬಾ ಸೆಲ್ವನ್, ಜಯಶ್ರೀ ಶೇಟ್, ಹಿರಿಯರಾದ ರಾಜೀವ್ ಶೆಟ್ಟಿ, ದಿನೇಶ್ ಬಂಗೇರಾ, ಪ್ರಸನ್ನ, ಬಾಬು ನಾಯ್ಕ, ಕೃಷ್ಣಯ್ಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News