×
Ad

ಭಾರತದಲ್ಲಿ 1.5 ಲಕ್ಷ ದಾಟಿದ ಕೋವಿಡ್ ಸಾವು

Update: 2021-01-06 10:42 IST

ಹೊಸದಿಲ್ಲಿ : ದೇಶದಲ್ಲಿ ಕೋವಿಡ್-19 ಲಸಿಕೆ ನೀಡಿಕೆಗೆ ವೇದಿಕೆ ಸಜ್ಜಾಗಿರುವ ನಡುವೆಯೇ ಈ ಮಾರಕ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1.5 ಲಕ್ಷದ ಗಡಿ ದಾಟಿದೆ. ಇದರೊಂದಿಗೆ ಅಮೆರಿಕ ಮತ್ತು ಬ್ರೆಝಿಲ್ ಬಳಿಕ 1.5ಕ್ಕೂ ಅಧಿಕ ಮಂದಿ ಸೋಂಕಿತರು ಮೃತಪಟ್ಟ ಮೂರನೇ ದೇಶ ಭಾರತ ಎನಿಸಿಕೊಂಡಿದೆ.

ಏತನ್ಮಧ್ಯೆ ದೇಶದಲ್ಲಿ ಮಂಗಳವಾರ 16,375 ಹೊಸ ಪ್ರಕರಣಗಳು ದೃಢಪಟ್ಟಿದ್ದು, 201 ಸಾವು ಸಂಭವಿಸಿದೆ. ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,03,56,844 ಆಗಿದ್ದು, ಒಟ್ಟು 99,75,958 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ 2,31,036 ಸಕ್ರಿಯ ಪ್ರಕರಣಗಳಿವೆ.

ವಿಶ್ವಾದ್ಯಂತ ಸೋಂಕು ನಿಯಂತ್ರಣಕ್ಕೆ ಪ್ರಯತ್ನಗಳು ನಡೆಯುತ್ತಿದ್ದು, ಜರ್ಮನಿಯಲ್ಲಿ ಅತ್ಯಧಿಕ ಕೊರೋನ ಪ್ರಕರಣಗಳಿರುವ ದೇಶಗಳಿಂದ ಬರುವ ಪ್ರವಾಸಿಗರನ್ನು ಎರಡು ಬಾರಿ ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಅಧ್ಯಕ್ಷೆ ಅಂಜೆಲಾ ಮೆರ್ಕಲ್ ಹೇಳಿದ್ದಾರೆ. ಅಂತೆಯೇ ಜರ್ಮನಿಯಲ್ಲಿ ವಿಧಿಸಿರುವ ಲಾಕ್‌ಡೌನನ್ನು ಜನವರಿ 31ರ ವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News