ಟ್ರಂಪ್‌ ಬೆಂಬಲಿಗರಿಂದ ಅಮೆರಿಕಾ ಸಂಸತ್‌ ಗೆ ದಾಳಿ: ಪ್ರಧಾನಿ ಮೋದಿ ಹೇಳಿದ್ದೇನು?

Update: 2021-01-07 13:55 GMT

ವಾಷಿಂಗ್ಟನ್‌ ಡಿಸಿ,ಜ.07: ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಡೊನಾಲ್ಡ್‌ ಟ್ರಂಪ್‌ ಪ್ರಚೋದನೆಯ ಕಾರಣದಿಂದಾಗಿ ಟ್ರಂಪ್‌ ಬೆಂಬಲಿಗರು ಅಮೆರಿಕಾದ ಸಂಸತ್‌ ಮೇಲೆ ದಾಳಿ ನಡೆಸಿದ್ದು, ಒಟ್ಟು 4 ಮಂದಿ ಈ ಗಲಭೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಟ್ರಂಪ್‌ ಅವರ ಫೇಸ್ ಬುಕ್,ಟ್ವಿಟರ್ ಹಾಗೂ ಇನ್ ಸ್ಟಾಗ್ರಾಮ್ ಗಳನ್ನು ಈಗಾಗಲೇ ತಾತ್ಕಾಲಿಕವಾಗಿ ಬ್ಲಾಕ್‌ ಮಾಡಲಾಗಿದೆ. ಈ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‌ ನಲ್ಲಿ ಖಂಡನೆ ವ್ಯಕ್ತಪಡಿಸಿದ್ದಾರೆ.

ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, "ಅಮೆರಿಕಾದ ಸಂಸತ್‌ ನ ಮೇಲೆ ನಡೆದಿರುವ ದಾಳಿ ಹಾಗೂ ದಂಗೆಯ ಕುರಿತ ಸುದ್ದಿ ಕೇಳುವಾಗ ನೋವೆನಿಸುತ್ತಿದೆ. ಅಧಿಕಾರ ಹಸ್ತಾಂತರ ಕಾರ್ಯಕ್ರಮವು ಉತ್ತಮ ರೀತಿಯಲ್ಲಿ ಶಾಂತಿಯುತವಾಗಿ ನಡೆಯಬೇಕು. ಪ್ರಜಾಪ್ರಭುತ್ವವು ಇಂತಹ ಅರ್ಥಹೀನ ಪ್ರತಿಭಟನೆಗಳನ್ನು ಬೆಂಬಲಿಸುವುದಿಲ್ಲ" ಎಂದು ಬರೆದಿದ್ದಾರೆ.

ಅಮೆರಿಕಾದ ಸಂಸತ್‌ ಭವನ ಇರುವ ವಾಷಿಂಗ್ಟನ್‌ ಡಿಸಿಯಲ್ಲಿ ಟ್ರಂಪ್ ಬೆಂಬಲಿಗರು ನಡೆಸಿರುವ ಗಲಭೆಗೆ ನಾಲ್ಕು ಮಂದಿ ಮೃತಪಟ್ಟು ಹಲವರು ಗಾಯಗೊಂಡಿರುವ ಕುರಿತು ವರದಿಯಾಗಿದೆ.

 "ಈ ರೀತಿ ದಂಗೆಯುಂಟು ಮಾಡಿ ಗಲಭೆಯೆಬ್ಬಿಸಿ ಸಂಸತ್‌ ಭವನದ ಮೇಲೆ ದಾಳಿ ಮಾಡುವುದು ಪ್ರತಿಭಟನೆಯ ರೂಪವಲ್ಲ" ಎಂದು ನೂತನ ಅಧ್ಯಕ್ಷ ಜೋ ಬೈಡನ್‌ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News