ಸೋನು ಸೂದ್ ವಿರುದ್ಧ ಎಫ್ ಐಆರ್ ದಾಖಲಿಸಿ: ಮುಂಬೈ ಪೊಲೀಸರಿಗೆ ದೂರು ನೀಡಿದ ಬಿಎಂಸಿ

Update: 2021-01-07 07:47 GMT

ಮುಂಬೈ: ನಟ ಸೋನು ಸೂದ್ ವಿರುದ್ಧ ಮುಂಬೈ ಪೊಲೀಸರಿಗೆ ಲಿಖಿತ ದೂರನ್ನು ನೀಡಿರುವ ಬೃಹನ್ಮುಂಬಯಿ ಮಹಾನಗರ ಪಾಲಿಕೆ(ಬಿಎಂಸಿ)ನಟನ ವಿರುದ್ದ ತಕ್ಷಣವೇ ಎಫ್ ಐಆರ್ ದಾಖಲಿಸುವಂತೆ ಕೋರಿದೆ.

ಸೋನು ಸೂದ್ ಅಗತ್ಯದ ಅನುಮತಿ ಪಡೆಯದೇ ತನ್ನ ವಸತಿ ಕಟ್ಟಡವನ್ನು ಹೊಟೇಲ್ ಆಗಿ ಪರಿವರ್ತಿಸಿದ್ದಾರೆ ಎಂದು ಬಿಎಂಸಿ ಆರೋಪಿಸಿದೆ. ಈ ಕುರಿತಂತೆ ಬಿಎಂಸಿ, ಸೂದ್ ಗೆ ಹಲವು ಬಾರಿ ನೋಟಿಸ್ ಗಳನ್ನು  ಕಳುಹಿಸಿಕೊಟ್ಟಿದೆ. ನಟ ಇದಕ್ಕೆ ಉತ್ತರ ನೀಡಲು ವಿಫಲರಾಗಿದ್ದರು.  ಹೀಗಾಗಿ ಬಿಎಂಸಿ  ಈ ಹೆಜ್ಜೆ ಇಟ್ಟಿದೆ.

ನಟ ಸೋನು ಸೂದ್ ಹಾಗೂ ಅವರ ಪತ್ನಿ ಸೋನಾಲಿ ಸೂದ್ ವಿರುದ್ದ ಕಟ್ಟಡದ ಮೇಲೆ ಅಕ್ರಮ ನಿರ್ಮಾಣದ ಆರೋಪ ಹೊರಿಸಲಾಗಿದೆ.

ಸೋನು ಸೂದ್ ಮುಂಬೈನ ಜುಹುವಿನ ಶಕ್ತಿ ನಗರದಲ್ಲಿ ವಾಸಿಸುತ್ತಿದ್ದು, ಇದೊಂದು ಆರು ಮಹಡಿಯ ಕಟ್ಟಡವಾಗಿದ್ದು, ವಸತಿ ಕಟ್ಟಡವಾಗಿದೆ. ಇದನ್ನು ಹೊಟೇಲ್ ಆಗಿ ಪರಿವರ್ತಿಸಲಾಗಿದೆ. ಸರಿಯಾದ ಅನುಮತಿ ಇಲ್ಲದೇ ಸೋನು ಸೂದ್ ಕಟ್ಟಡವನ್ನು ಹೋಟಲ್ ಆಗಿ ಬದಲಾಯಿಸಿದ್ದಾರೆ ಎಂದು ಬಿಎಂಸಿ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News