×
Ad

ಸರಪಳಿಯಲ್ಲಿ ಬಂಧಿತನಾಗಿದ್ದ ಕಿವುಡ-ಮೂಕ ವ್ಯಕ್ತಿಯ ರಕ್ಷಣೆ

Update: 2021-01-07 20:47 IST

ಔರಂಗಾಬಾದ್, ಜ.7: ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ನಳದುರ್ಗ ಪಟ್ಟಣದ ಹೋಟೆಲ್‌ವೊಂದರಲ್ಲಿ ಕಳೆದ ಮೂರು ತಿಂಗಳುಗಳಿಂದಲೂ ಸರಪಳಿಯಲ್ಲಿ ಬಂಧಿತನಾಗಿದ್ದ 35ರ ಹರೆಯದ ಕಿವುಡ-ಮೂಕ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿದ್ದಾರೆ.

ಮಂಗಳವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಹೋಟೆಲ್‌ನ ಮಾಲಿಕ ಮೋತಿಲಾಲ ತಾಂಬೋಲಿ ಎಂಬಾತನನ್ನು ಬಂಧಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಕಳೆದ ಮೂರು ತಿಂಗಳುಗಳಿಂದಲೂ ಕಿವುಡ-ಮೂಕ ವ್ಯಕ್ತಿಯನ್ನು ಹೋಟೆಲ್ ಕೋಣೆಯಲ್ಲಿನ ಕಂಬಕ್ಕೆ ಸರಪಳಿಯಿಂದ ಕಟ್ಟಿಹಾಕಲಾಗಿದೆ ಎಂಬ ಮಾಹಿತಿ ಲಭಿಸಿದ್ದು, ತಕ್ಷಣ ಕಾರ್ಯಾಚರಣೆ ನಡೆಸಿ ಆತನನ್ನು ರಕ್ಷಿಸಲಾಗಿದೆ. ವ್ಯಕ್ತಿಯ ಗುರುತು ಮತ್ತು ಆತನನ್ನು ಸರಪಳಿಯಿಂದ ಕಟ್ಟಿ ಹಾಕಲು ಕಾರಣವೇನು ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ ಎಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News