ಕೇಂದ್ರ ಸರಕಾರ ವಿಪತ್ತನ್ನು ಅವಕಾಶವಾಗಿ ಪರಿವರ್ತಿಸುತ್ತಿದೆ: ಸೋನಿಯಾ ಗಾಂಧಿ

Update: 2021-01-07 18:08 GMT

ಹೊಸದಿಲ್ಲಿ, ಜ. 7: ರೈತರ ಪ್ರತಿಭಟನೆ ಹಾಗೂ ತೈಲ ಬೆಲೆ ಏರಿಕೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಸ್ವಾತಂತ್ರ್ಯದ ಬಳಿಕ ದೇಶ ಇಂದು ಮೊದಲ ಬಾರಿ ಕವಲು ದಾರಿಯಲ್ಲಿ ನಿಂತಿದೆ ಎಂದಿದ್ದಾರೆ.

ತೈಲ ಬೆಲೆ ಏರಿಕೆಯ ಕುರಿತು ಮಾತನಾಡಿದ ಅವರು, ಕೇಂದ್ರ ಸರಕಾರ ತೈಲ ಬೆಲೆ ಏರಿಕೆಯಿಂದ ಲಾಭ ಮಾಡಿಕೊಳ್ಳುತ್ತಿದೆ. ತನ್ನ ಬೊಕ್ಕಸವನ್ನು ತುಂಬಿಸಿಕೊಳ್ಳಲು ವಿಪತ್ತನ್ನು ಅವಕಾಶವಾಗಿ ಪರಿವರ್ತಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಸರಕಾರದ ಅಸೂಕ್ಷ್ಮತೆಯ ಕಾರಣದಿಂದ ಬಡವರು, ರೈತರು ಹಾಗೂ ಮಧ್ಯಮವರ್ಗದವರ ಬೆನ್ನು ಮೂಳೆ ಮುರಿಯುತ್ತಿದೆ ಎಂದು ಸೋನಿಯಾ ಗಾಂಧಿ ಹೇಳಿದರು. ಪೆಟ್ರೋಲ್ ಹಾಗೂ ಡೀಸೆಲ್‌ನ ಅಬಕಾರಿ ಸುಂಕವನ್ನು ಯುಪಿಎ ಸರಕಾರದ ಸಂದರ್ಭದಲ್ಲಿ ಇದ್ದಷ್ಟೇ ಮಾಡಿ ಹಾಗೂ ತೊಂದರೆಗೀಡಾದ ಜನರಿಗೆ ಕೂಡಲೇ ಪರಿಹಾರ ನೀಡಿ ಎಂದು ನಾನು ಸರಕಾರವನ್ನು ಆಗ್ರಹಿಸುತ್ತೇನೆ ಎಂದು ಅವರು ಹೇಳಿದರು.

ಮೂರು ಕೃಷಿ ಕಾಯ್ದೆಗಳನ್ನು ಕೂಡಲೇ ರದ್ದುಗೊಳಿಸಿ ಹಾಗೂ ರೈತರ ಬೇಡಿಕೆಗಳನ್ನು ಈಡೇರಿಸಿ ಎಂದು ನಾನು ಮತ್ತೊಮ್ಮೆ ಕೇಂದ್ರ ಸರಕಾರದಲ್ಲಿ ಮನವಿ ಮಾಡುತ್ತಿದ್ದೇನೆ ಎಂದು ಸೋನಿಯಾ ಗಾಂಧಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News