ಮುಂದಿನ ಕೆಲವೇ ದಿನಗಳಲ್ಲಿ ಕೊರೋನ ಲಸಿಕೆ ವಿತರಣೆ: ಹರ್ಷವರ್ಧನ್
Update: 2021-01-08 13:21 IST
ಚೆನ್ನೈ: ಮುಂದಿನ ಕೆಲವು ದಿನಗಳಲ್ಲಿ ದೇಶದ ಜನತೆಗೆ ಕೋವಿಡ್ -19 ಲಸಿಕೆಗಳನ್ನು ವಿತರಿಸಲು ಸಾಧ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ.
ಎರಡನೇ ಹಂತದ ಲಸಿಕೆ ವಿತರಣೆ ತಾಲೀಮು ಶುಕ್ರವಾರ ನಡೆಯುತ್ತಿದ್ದು, ಈ ಮಧ್ಯೆ ತಮಿಳುನಾಡಿಗೆ ಭೇಟಿ ನೀಡಿರುವ ಆರೋಗ್ಯ ಸಚಿವರು ಈ ಮಾಹಿತಿ ನೀಡಿದರು.
ಅತ್ಯಂತ ಕಡಿಮೆ ಅವಧಿಯಲ್ಲಿ ಕೋವಿಡ್-19 ಲಸಿಕೆ ಅಭಿವೃದ್ಧಿಪಡಿಸುವ ಮೂಲಕ ಭಾರತವು ಉತ್ತಮ ಸಾಧನೆ ಮಾಡಿದೆ. ಮುಂದಿನ ಕೆಲವು ದಿನಗಳಲ್ಲಿ ನಾವು ಈ ಲಸಿಕೆಗಳನ್ನು ದೇಶದ ಜನತೆಗೆ ನೀಡಲು ಸಾಧ್ಯವಾಗುತ್ತದೆ. ಇದಕ್ಕೂ ಮೊದಲು ನಮ್ಮ ಆರೋಗ್ಯ ವೃತ್ತಿಪರರಿಗೆ ಹಾಗೂ ಮುಂಚೂಣಿಯ ಕಾರ್ಯಕರ್ತರಿಗೆ ನೀಡಲಿದ್ದೇವೆ ಎಂದು ಹರ್ಷವರ್ಧನ್ ಹೇಳಿದ್ದಾರೆ