ಅಯೋಧ್ಯೆಯನ್ನು ಸ್ವಚ್ಛ ಆಧ್ಯಾತ್ಮಿಕ ಪ್ರವಾಸೋದ್ಯಮ ಕೇಂದ್ರವಾಗಿಸಲು ಐಐಎಂ-ಇಂದೋರ್ ಜತೆ ಕೈಜೋಡಿಸಿದ ಸ್ಥಳೀಯಾಡಳಿತ

Update: 2021-01-08 10:21 GMT

ಇಂದೋರ್,ಜ.08: ಕಳೆದ ನಾಲ್ಕು ವರ್ಷಗಳಲ್ಲಿ ಸ್ವಚ್ಛ್ ಸರ್ವೇಕ್ಷಣ್ ರ್ಯಾಂಕಿಂಗ್‍ನಲ್ಲಿ ಮೊದಲ ಸ್ಥಾನ ಪಡೆಯುತ್ತಾ ಬಂದಿರುವ ಇಂದೋರ್ ನಗರದ ಸ್ವಚ್ಚತಾ ಮಾದರಿಯನ್ನು ಅಯ್ಯೋಧ್ಯೆಯಲ್ಲಿ ಜಾರಿಗೊಳಿಸುವ ಉದ್ದೇಶದಿಂದ ಐಐಎಂ-ಇಂದೋರ್ ಹಾಗೂ ಮುನಿಸಿಪಲ್ ಕಾರ್ಪೊರೇಷನ್ ಆಫ್ ಅಯ್ಯೋಧ್ಯಾ ಮೂರು ವರ್ಷ  ಜಾರಿಯಲ್ಲಿರುವ ಒಪ್ಪಂದಕ್ಕೆ ಸಹಿ ಹಾಕಿದೆ. ಇದರ ಭಾಗವಾಗಿ ಇಂದೋರ್ ಸ್ವಚ್ಛತಾ ಮಾದರಿಯನ್ನು ಅಯ್ಯೋಧ್ಯೆಯಲ್ಲಿ ಜಾರಿಗೊಳಿಸಲಾಗುವುದು. ಅಯ್ಯೋಧ್ಯೆಯನ್ನು ಸ್ವಚ್ಛ ಆಧ್ಯಾತ್ಮಿಕ ಪ್ರವಾಸೋದ್ಯಮ ತಾಣವಾಗಿ ಜಾಗತಿಕ ನಕ್ಷೆಯಲ್ಲಿ ಮೂಡಿಸುವ ಉದ್ದೇಶದೊಂದಿಗೆ ಈ ಕಾರ್ಯಯೋಜನೆಗೆ ನೀಲನಕ್ಷೆಯನ್ನು ಐಐಎಂ ಇಂದೋರ್ ಸಿದ್ಧಪಡಿಸಲಿದೆ ಎಂದು ತಿಳಿದು ಬಂದಿದೆ.

ಸ್ವಚ್ಛ ಭಾರತ್ ಮಿಷನ್ ಅನ್ವಯ ಮಾಹಿತಿ, ಶಿಕ್ಷಣ ಮತ್ತು ಸಂವಹನದ ಮೂಲಕ ಜನರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲು ಐಐಎಂ-ಇಂದೋರ್  ಕಾರ್ಯಯೋಜನೆ ಸಿದ್ಧಪಡಿಸಲಿದೆ. ಅಯ್ಯೋಧ್ಯೆ ಮುನಿಸಿಪಲ್ ಉದ್ಯೋಗಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಂಸ್ಥೆ ತರಬೇತಿ ಕಾರ್ಯಕ್ರಮಗಳನ್ನೂ ನಡೆಸಲಿದೆ.

ಈ ತಂಡವನ್ನು ಐಐಎಂ-ಇಂದೋರ್ ನಿರ್ದೇಶಕ ಹಿಮಾಂಶು ರಾಯ್ ಮುನ್ನಡೆಸಲಿದ್ದು  ಪ್ರೊಫೆಸರ್‍ಗಳಾದ ಗಣೇಶ್ ಎನ್, ಪ್ರಶಾಂತ್ ಸಾಲ್ವನ್, ಡಾ ಶ್ರುತಿ ತಿವಾರಿ ಹಾಗೂ ಆದಿತ್ಯ ದೇಶಬಂಧು ಈ ಯೋಜನೆಯಲ್ಲಿ ಕೈಜೋಡಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News