ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಹೋದರನ ಪುತ್ರಿ ಚಿತ್ರಾ ಘೋಷ್ ನಿಧನ

Update: 2021-01-08 16:53 GMT

ಕೋಲ್ಕತಾ, ಜ. 8: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಹೋದರನ ಪುತ್ರಿ, ಖ್ಯಾತ ಶಿಕ್ಷಣ ತಜ್ಞೆ ಚಿತ್ರಾ ಘೋಷ್ (90) ಅವರು ಹೃದಯಾಘಾತದಿಂದ ಗುರುವಾರ ನಿಧನರಾಗಿದ್ದಾರೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಹೋದರ ಶರತ್ ಚಂದ್ರ ಬೋಸ್ ಅವರ ಕಿರಿಯ ಪುತ್ರಿ ಚಿತ್ರಾ ಘೋಷ್ ಗುರುವಾರ ಬೆಳಗ್ಗೆ 10.30ಕ್ಕೆ ನಿಧನರಾದರು ಎಂದು ಚಿತ್ರಾ ಘೋಷ್ ಅವರ ಸೋದರಳಿಯ ಹಾಗೂ ಬಿಜೆಪಿ ನಾಯಕ ಚಂದ್ರ ಕುಮಾರ್ ಬೋಸ್ ಹೇಳಿದ್ದಾರೆ.

ಜನರಿಗೆ ಬೋಧನೆ ಹಾಗೂ ಯುವಕರಿಗೆ ಪ್ರೇರಣೆ ನೀಡುವುದಕ್ಕೆ ಚಿತ್ರಾ ಘೋಷ್ ಅವರು ತನ್ನ ಜೀವನವನ್ನು ಮುಡಿಪಾಗಿರಿಸಿದ್ದರು ಎಂದು ಬೋಸ್ ಟ್ವೀಟ್ ಮಾಡಿದ್ದಾರೆ. ಚಿತ್ರಾ ಘೋಷ್ ಅವರು ಶಿಕ್ಷಣ ಹಾಗೂ ಸಮುದಾಯ ಸೇವೆಗಳಿಗೆ ಮಹತ್ತರ ಕೊಡುಗೆಗಳನ್ನು ನೀಡಿದ್ದಾರೆ. ಅವರ ನಿಧನದಿಂದ ಬಹಳ ಬೇಸರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News