ಮೂರನೇ ಟೆಸ್ಟ್: ಭಾರತ 244 ರನ್ ಗೆ ಆಲೌಟ್

Update: 2021-01-09 04:52 GMT

ಸಿಡ್ನಿ: ಪ್ಯಾಟ್ ಕಮಿನ್ಸ್(4-29) ಹಾಗೂ ಹೇಝಲ್ ವುಡ್(2-43)ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ತಂಡ ಇಲ್ಲಿ ನಡೆಯುತ್ತಿರುವ ಮೂರನೇಟೆಸ್ಟ್ ಮೂರನೇ ದಿನದಾಟದಲ್ಲಿ ಮೊದಲ ಇನಿಂಗ್ಸ್ ನಲ್ಲಿ 244 ರನ್ ಗಳಿಸಿ ಆಲೌಟಾಯಿತು.

ಭಾರತವನ್ನು 250ರೊಳಗೆ ನಿಯಂತ್ರಿಸಿರುವ ಆಸ್ಟ್ರೇಲಿಯ 94 ರನ್ ಇನಿಂಗ್ಸ್ ಮುನ್ನಡೆ ಸಾಧಿಸಿದೆ.
ಶುಭಮನ್ ಗಿಲ್ (50, 101 ಎಸೆತ, 8 ಬೌಂಡರಿ) ಚೇತೇಶ್ವರ ಪೂಜಾರ 50 ರನ್ (176 ಎಸೆತ, 5 ಬೌಂಡರಿ), ರಿಷಭ್ ಪಂತ್(36), ರವೀಂದ್ರ ಜಡೇಜ(ಔಟಾಗದೆ 28) ಹಾಗೂ ಅಜಿಂಕ್ಯ ರಹಾನೆ(22)ಎರಡಂಕೆಯ ಸ್ಕೋರ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News