×
Ad

ನಾಲ್ಕು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮಾಧವ್ ಸಿನ್ಹಾ ಸೋಳಂಕಿ ನಿಧನ

Update: 2021-01-09 12:29 IST

ಹೊಸದಿಲ್ಲಿ: ನಾಲ್ಕು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಮಾಧವ ಸಿನ್ಹಾ ಸೋಳಂಕಿ ಗಾಂಧಿನಗರದಲ್ಲಿ ತಮ್ಮ ಸ್ವಗೃಹದಲ್ಲಿ ನಿಧನರಾದರು. ಕಾಂಗ್ರೆಸ್‍ನ ಹಿರಿಯ ನಾಯಕನಿಗೆ 93 ವರ್ಷ ವಯಸ್ಸಾಗಿತ್ತು.  

ಸೋಳಂಕಿ  ಅವರು ಪ್ರಧಾನಮಂತ್ರಿ ಪಿ.ವಿ.ನರಸಿಂಹರಾವ್ ಅವಧಿಯಲ್ಲಿ ವಿದೇಶಾಂಗ ವ್ಯವಹಾರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.
“ಮಾಧವ ಸಿನ್ಹಾ ಸೋಳಂಕಿ  ದಶಕಗಳ ಕಾಲ ಗುಜರಾತ್ ರಾಜಕೀಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸಮಾಜಕ್ಕೆ ಸಲ್ಲಿಸಿರುವ ಶ್ರೀಮಂತ ಸೇವೆಯ ಮೂಲಕ ಸ್ಮರಣೀಯರಾಗಿದ್ದಾರೆ. ಅವರ ನಿಧನದಿಂದ ಬೇಸರವಾಗಿದೆ. ಅವರ ಮಗ ಭರತ್ ಸೋಳಂಕಿ ಅವರೊಂದಿಗೆ ಮಾತನಾಡಿದ್ದೇನೆ. ತನ್ನ ಸಂತಾಪವನ್ನು ವ್ಯಕ್ತಪಡಿಸಿದ್ದೇನೆ. ಓಂ ಶಾಂತಿ’’ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟಿಸಿದ್ದಾರೆ.

ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ಹಿರಿಯ ನಾಯಕನ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸಿದ್ದಾಂತವನ್ನುಬಲಿಷ್ಠಗೊಳಿಸಲು ಹಾಗೂ ಸಾಮಾಜಿಕ ನ್ಯಾಯದ ಉತ್ತೇಜನಕ್ಕಾಗಿ ನೀಡಿರುವ ಕೊಡುಗೆಗಾಗಿ ಅವರು ಸ್ಮರಣೀಯರಾಗಿದ್ದರು ಎಂದು ರಾಹುಲ್ ಗಾಂಧಿ ಟ್ವೀಟಿಸಿದ್ದಾರೆ.

ತನ್ನ ನಡವಳಿಕೆಯ ಮೂಲಕ ಸೋಳಂಕಿ  ಅವರು ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಚಾವ್ಡಾ ಹೇಳಿದ್ದಾರೆ.

ಸೋಳಂಕಿ ಅವರು 1976 ಹಾಗೂ 1990ರ ನಡುವೆ 4 ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ನರೇಂದ್ರ ಮೋದಿಗಿಂತ ಮೊದಲು ರಾಜ್ಯದಲ್ಲಿ ದೀರ್ಘ ಕಾಲ ಮುಖ್ಯಮಂತ್ರಿಯಾಗಿದ್ದ ಹಿರಿಮೆಗೆ ಪಾತ್ರರಾಗಿದ್ದರು. 1980ರ ದಶಕದಲ್ಲಿ ಗುಜರಾತ್ ನಲ್ಲಿ ಚುನಾವಣಾ ಮೇಲುಗೈ ಸಾಧಿಸಲು ಕೆ ಎಚ್ ಎ ಎಂ(ಕ್ಷತ್ರೀಯ, ಹರಿಜನ್ ಅಥವಾ ದಲಿತ, ಆದಿವಾಸಿ, ಮುಸ್ಲಿಂ)ಸಾಮಾಜಿಕ ಒಕ್ಕೂಟವನ್ನು ಒಟ್ಟುಗೂಡಿಸಿದ್ದಕ್ಕಾಗಿ ಅವರನ್ನು ಸ್ಮರಿಸಲಾಗುತ್ತದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News