ಅಮೆರಿಕ ಸಂಸತ್‌ ದಾಳಿಕೋರರ ಮಧ್ಯೆ ಭಾರತದ ಧ್ವಜ ಬೀಸಿದವ ಸಂಘಪರಿವಾರ ಬೆಂಬಲಿಗ?

Update: 2021-01-09 12:57 GMT

ಹೊಸದಿಲ್ಲಿ,ಜ.09: ಅಮೆರಿಕಾದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರೋಪಿಸಿದ ಬೆನ್ನಲ್ಲೇ ಅಮೆರಿಕಾದಲ್ಲಿ ಹಿಂಸಾಚಾರ ನಡೆದಿತ್ತು. ಅಮೆರಿಕಾದ ಸಂಸತ್‌ ಭವನಕ್ಕೆ ನುಗ್ಗಿದ್ದ ಟ್ರಂಪ್‌ ಬೆಂಬಲಿಗರು ವ್ಯಾಪಕ ಹಾನಿಯುನ್ನುಂಟು ಮಾಡಿದ್ದರು. ಈ ಹಿಂಸಾಚಾರದಲ್ಲಿ ಒಟ್ಟು 5 ಮಂದಿ ಮೃತಪಟ್ಟಿದ್ದರು. ಟ್ರಂಪ್‌ ಬೆಂಬಲಿಗರ ಮಧ್ಯೆ ಭಾರತದ ಧ್ವಜವೂ ಕಾಣಿಸಿಕೊಂಡಿದ್ದು, ತಾನೇ ಆ ಧ್ವಜದೊಂದಿಗೆ ಪ್ರತಿಭಟನಾ ಸ್ಥಳಕ್ಕೆ ತೆರಳಿದ್ದೆ ಎಂದು ವಿನ್ಸೆಂಟ್‌ ಕ್ಸೇವಿಯರ್‌ ಎಂಬಾತ ಟ್ವಿಟರ್‌ ನಲ್ಲಿ ಪ್ರಕಟಿಸಿದ್ದ.

ವಿನ್ಸೆಂಟ್‌ ಕ್ಸೇವಿಯರ್‌ ಮೂಲತಃ ಕೇರಳ ನಿವಾಸಿಯಾಗಿದ್ದು, ತಾನೇ ಧ್ವಜವನ್ನು ಹಿಡಿದುಕೊಂಡು ಟ್ರಂಪ್‌ ಬೆಂಬಲಿಸಲು ತೆರಳಿದ್ದೆ ಎಂದು ತಮ್ಮ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದ್ದ. ಬಳಿಕ ಆತ ಶಶಿ ತರೂರ್‌ ಜೊತೆಗಿದ್ದ ಫೋಟೊವೊಂದು ವೈರಲ್‌ ಆಗಿದ್ದು ಆತ ಕಾಂಗ್ರೆಸಿಗ ಎಂದು ಪ್ರಚಾರ ಮಾಡಲಾಗಿತ್ತು. ಆದರೆ ಇದೀಗ ವಿನ್ಸೆಂಟ್‌ ಬಿಜೆಪಿ ಮುಖಂಡರ ಜೊತೆಗಿರುವ ಫೋಟೊಗಳು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ ಹಾಗೂ ಚಿತ್ರದಲ್ಲಿ ಆತನ ಜೊತೆಗಿರುವ ಇನ್ನೋರ್ವ ವ್ಯಕ್ತಿಯೂ ದಂಗೆಯ ನಡುವೆ ಧ್ವಜ ಹಾರಿಸಿದ್ದ ಎಂದು ತಿಳಿದು ಬಂದಿದೆ.

ಸದ್ಯ ಈ ಕುರಿತಾದಂತೆ ಚರ್ಚೆಗಳು ನಡೆಯುತ್ತಿದ್ದು, ವಿನ್ಸೆಂಟ್‌ ಜೊತೆಗೆ ಧ್ವಜ ಹಾರಿಸಿದ ವ್ಯಕ್ತಿ ಕೃಷ್ಣ ಗುಡಿಪತಿಯು ವಿರಾಟ್‌ ಹಿಂದುಸ್ತಾನ್‌ ಸಂಘಟನೆಯ ಹಾಗೂ ಬಿಜೆಪಿ ಪಕ್ಷದ ಬೆಂಬಲಿಗ ಎಂದು ತಿಳಿದು ಬಂದಿದೆ. ಈತ ಮತ್ತು ವಿನ್ಸೆಂಟ್ ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ, ಪೂನಮ್‌ ಮಹಾಜನ್‌, ಆರ್ಟ್‌ ಆಫ್‌ ಲಿವಿಂಗ್‌ ಮುಖ್ಯಸ್ಥ ರವಿಶಂಕರ್‌ ಗುರೂಜಿ ಜೊತೆಗಿರುವ ಫೋಟೊಗಳು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ.

ಈ ಘಟನೆಯಿಂದ ಭಾರತದ ಘನತೆಗೆ ವಿಶ್ವಮಟ್ಟದಲ್ಲಿ ಹಾನಿಯಾಗಿದೆ ಎಂದು ಆರೋಪಿಸಿ ವ್ಯಕ್ತಿಯೋರ್ವರು ದಿಲ್ಲಿಯಲ್ಲಿ ಪ್ರಕರಣವನ್ನೂ ದಾಖಲಿಸಿದ್ದಾರೆ. ಮಾತ್ರವಲ್ಲದೇ ವಿನ್ಸೆಂಟ್‌ ಕ್ಸೇವಿಯರ್‌ ನ ಎಲ್ಲಾ ಸಾಮಾಜಿಕ ತಾಣ ಖಾತೆಗಳನ್ನು ನಿಷ್ಕ್ರಿಯಗೊಳಿಸಬೇಕು ಎಂದೂ ಆಗ್ರಹಿಸಲಾದ ಕುರಿತು ANI ವರದಿ ಮಾಡಿದೆ.

ಈ ಕುರಿತಾದಂತೆ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿರುವ ಫೋಟೊಗಳು ಇಲ್ಲಿವೆ.

There is a lot of controversy over who was holding and waving Indian flag in Capitol hill. One pic of Xavier holding...

Posted by Unofficial: Subramanian Swamy on Friday, 8 January 2021

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News