ದಿಲ್ಲಿಯ ಪ್ರತಿಭಟನಾ ಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ

Update: 2021-01-10 06:31 GMT

ಹೊಸದಿಲ್ಲಿ: ಸುಮಾರು ಎರಡು ತಿಂಗಳುಗಳಿಂದ ಕೇಂದ್ರ ಸರಕಾರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ರೈತರುಗಳ ಪೈಕಿ ಪಂಜಾಬ್‍ನ ಫತೇಗಡ ಸಾಹಿಬ್‍ನ 40 ರ ವಯಸ್ಸಿನ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ದಿಲ್ಲಿ-ಹರ್ಯಾಣ ಗಡಿಯಲ್ಲಿರುವ ಸಿಂಘೂವಿನಲ್ಲಿ ವಿಷಪ್ರಾಶನ ಮಾಡಿ ರೈತ ಸಾವನ್ನಪ್ಪಿದ್ದಾರೆ.

ಮೃತಪಟ್ಟ ರೈತನನ್ನು ಅಮರಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ಹಾಗೂ ಕನಿಷ್ಠ ಬೆಂಬಲ ಬೆಲೆ(ಎಂಎಸ್‍ಪಿ)ಗೆ ಕಾನೂನು ಖಾತ್ರಿನೀಡಬೇಕೆಂಬ ಬೇಡಿಕೆಯನ್ನು ಸರಕಾರ ನಿರಾಕರಿಸಿದ್ದರಿಂದ ಬೇಸತ್ತು ಈ ಹೆಜ್ಜೆ ಇಡುವುದಾಗಿ ಸಾವಿಗೆ ಮೊದಲು ಸ್ನೇಹಿತರಲ್ಲಿ ಮೃತ ರೈ ತ ಹೇಳಿರುವುದಾಗಿ ತಿಳಿದುಬಂದಿದೆ.

ತನ್ನ ಸಾವಿನಿಂದ ರೈತರ ಚಳುವಳಿಗೆ ಯಶಸ್ಸು ಸಿಗಬಹುದು ಎಂಬ ವಿಶ್ವಾಸ ನನಗಿದೆ ಎಂದು ಮೃತ ರೈತ ಹೇಳಿದ್ದಾನೆಂದು ತಿಳಿದುಬಂದಿದೆ.

ಆತ್ಮಹತ್ಯೆಗೈದ ರೈತನನ್ನು ಸೋನಿಪತ್‍ನ ಎಫ್‍ಐಎಂಎಸ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆಯ ವೇಳೆ ಸಿಂಗ್ ಮೃತಪಟ್ಟಿದ್ದಾರೆ. ಮೃತದೇಹವನ್ನು ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದ್ದು, ರವಿವಾರ ಬೆಳಗ್ಗೆ ಶವಪರೀಕ್ಷೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News