ಇಂಡೋನೇಶ್ಯಾ: ಪತನಗೊಂಡ ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಪತ್ತೆ

Update: 2021-01-10 13:22 GMT

ಜಕಾರ್ತಾ,ಜ.10: ಇಂಡೋನೇಶ್ಯಾದ ಜಕಾರ್ತಾದಿಂದ ಟೇಕಾಫ್‌ ಆದ ನಾಲ್ಕು ನಿಮಿಷಗಳಲ್ಲೇ ಪತನಗೊಂಡಿದ್ದ 62 ಮಂದಿ ಪ್ರಯಾಣಿಕರಿದ್ದ ವಿಮಾನದ ಅವಶೇಷಗಳು ಹಾಗೂ ಇನ್ನಿತರ ವಸ್ತುಗಳ ಕುರುಹು ಇಂದು ದೊರಕಿತ್ತು. ಇದೀಗ ವಿಮಾನದ ಬ್ಲಾಕ್‌ ಬಾಕ್ಸ್‌ ಕೂಡಾ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಇಂದು ಮುಳುಗುತಜ್ಞರು ಸಮುದ್ರದ ಸುಮಾರು 23 ಮೀಟರ್‌ ಆಳದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದು, ಈ ವೇಳೆ ಕೆಲವು ಅಂಗಾಂಗಗಳು, ವಿಮಾನದ ಭಗ್ನಾವಶೇಷಗಳು, ಕೆಲವು ಪ್ರಯಾಣಿಕರ ವಸ್ತ್ರಗಳು ದೊರಕಿತ್ತು. ಇದೇ ಸಂದರ್ಭ, "ನಾವು ವಿಮಾನದ ಎರಡು ಬ್ಲಾಕ್‌ ಬಾಕ್ಸ್‌ ಗಳು ಇರುವ ಸ್ಥಳವನ್ನು ಪತ್ತೆ ಹಚ್ಚಿದ್ದೇವೆ" ಎಂದು ಇಂಡೋನೇಶ್ಯಾದ ಸಾರಿಗೆ ಭದ್ರತಾ ಏಜೆನ್ಸಿಯ ಮುಖ್ಯಸ್ಥರು ತಿಳಿಸಿದ್ದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News