×
Ad

ಅಮೆರಿಕ ಸಂಸತ್‌ ದಾಳಿ ಅಕ್ಷಮ್ಯ, ನಾನು ಟ್ರಂಪ್‌ ಗೆ ಕಾಲ್‌ ಮಾಡಿ ಮಾತನಾಡುತ್ತೇನೆ: ಕೇಂದ್ರ ಸಚಿವ ರಾಮದಾಸ್‌ ಅಠಾವಳೆ

Update: 2021-01-10 22:33 IST

ಹೊಸದಿಲ್ಲಿ,ಜ.10: ಕೊರೋನ ಪ್ರಾರಂಭದ ಸಮಯದಲ್ಲಿ ಕೊರೋನ ರೋಗವನ್ನು ನಿರ್ಮೂಲನೆ ಮಾಡುತ್ತೇನೆಂದು ʼಗೊ ಕೊರೊನಾ ಗೊʼಘೋಷಣೆಯನ್ನು ಕೂಗಿ ಲಾಕ್‌ ಡೌನ್‌ ಮಧ್ಯೆಯೂ ನಗೆಪಾಟಲಿಗೀಡಾಗಿದ್ದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ್‌ ಅಠಾವಳೆ ಇದೀಗ ಇನ್ನೊಂದು ಹೇಳಿಕೆ ನೀಡಿ ಸಾಮಾಜಿಕ ತಾಣದಾದ್ಯಂತ ಟ್ರೋಲ್‌ ಗೆ ಗುರಿಯಾಗಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಸಚಿವ ರಾಮದಾಸ್‌ ಅಠಾವಳೆ, "ಅಮೆರಿಕಾದ ಸಂಸತ್‌ ಭವನದಲ್ಲಿ ನಡೆದ ಘಟನೆಯನ್ನು ನಾನು ಖಂಡಿಸುತ್ತಿದ್ದೇನೆ. ಇದು ರಿಪಬ್ಲಿಕನ್‌ ಪಾರ್ಟಿಗೆ ಮಾತ್ರವಲ್ಲ, ಅಮೆರಿಕಾಗೂ, ಪ್ರಜಾಪ್ರಭುತ್ವಕ್ಕೂ ಮಾಡಿದ ಅವಮಾನವಾಗಿದೆ. ಈ ಕಾರಣದಿಂದಾಗಿ ನಾನು ನನ್ನ ಅಸಮಧಾನವನ್ನು ವ್ಯಕ್ತಪಡಿಸುತ್ತಿದ್ದೇನೆ. ಈ ಕುರಿತಾದಂತೆ ನಾನು ಟ್ರಂಪ್‌ ರೊಂದಿಗೆ ಫೋನ್‌ ಮಾಡಿ ಮಾತನಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಸದ್ಯ ಸಾಮಾಜಿಕ ತಾಣದಾದ್ಯಂತ ಅವರ ಹೇಳಿಕೆ ವ್ಯಂಗ್ಯಕ್ಕೀಡಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News