ಸೀರಮ್ ಲಸಿಕೆ: ಸೀಸೆಗೆ 250 ರೂ. ದರ ನಿಗದಿ

Update: 2021-01-11 14:28 GMT

ಹೊಸದಿಲ್ಲಿ, ಜ.11: ಕೊರೋನ ಸೋಂಕಿನ ವಿರುದ್ಧದ ಲಸಿಕೆಯ 1 ಮಿಲಿಯನ್ ಡೋಸ್ ಪೂರೈಸಲು ಭಾರತ ಸರಕಾರ ವ್ಯಾಪಾರಾದೇಶ(ಆರ್ಡರ್) ಸಲ್ಲಿಸಿದೆ . ಪ್ರತೀ ಸೀಸೆಯ ಬೆಲೆಯನ್ನು 250 ರೂ. ಎಂದು ನಿಗದಿಗೊಳಿಸಿರುವುದಾಗಿ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ) ಹೇಳಿದೆ.

ದೇಶದಾದ್ಯಂತ ಕೊರೋನ ಲಸಿಕೆ ಅಭಿಯಾನ ಜನವರಿ 16ರಿಂದ ಆರಂಭವಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಘೋಷಿಸಿದೆ. ಆರೋಗ್ಯ ಕಾರ್ಯಕರ್ತರು ಮತ್ತು ಕೊರೋನ ವಿರುದ್ಧದ ಹೋರಾಟದ ಮುಂಚೂಣಿ ಕಾರ್ಯಕರ್ತರಿಗೆ (ಸುಮಾರು 3 ಕೋಟಿ), 50 ವರ್ಷಕ್ಕಿಂತ ಹೆಚ್ಚು ವಯಸ್ಸಾದವರು, ಹಲವು ವಿಧದ ಕಾಯಿಲೆಯಿಂದ ಬಳಲುತ್ತಿರುವವರಿಗೆ (ಸುಮಾರು 27 ಕೋಟಿ) ಮೊದಲ ಆದ್ಯತೆ ನೀಡಲಾಗುತ್ತದೆ. ಈ ಮಧ್ಯೆ, ಕೊರೋನ ಲಸಿಕೆ ನೀಡುವ ಅಭಿಯಾನದ ಪೂರ್ವಸಿದ್ಧತೆ ಪರಿಶೀಲನೆಗೆ ಸೋಮವಾರ ಮುಖ್ಯಮಂತ್ರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸಿಂಗ್ ಸಭೆ ನಡೆಸಿದ ಪ್ರಧಾನಿ ಮೋದಿ, ಭಾರತದ ಲಸಿಕೆ ಅತ್ಯಂತ ಕಡಿಮೆ ವೆಚ್ಚದ್ದಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News