ಬ್ರಿಟನ್: ಇನ್ನು ಕೆಲವು ವಾರಗಳಲ್ಲಿ ಕೊರೋನ ಉಲ್ಬಣ

Update: 2021-01-11 15:26 GMT

ಲಂಡನ್, ಜ. 11: ಬ್ರಿಟನ್‌ನಲ್ಲಿ ಮುಂದಿನ ಕೆಲವು ವಾರಗಳಲ್ಲಿ ಕೊರೋನ ವೈರಸ್ ಸಾಂಕ್ರಾಮಿಕ ಪರಿಸ್ಥಿತಿಯು ಹದಗೆಡಲಿದ್ದು, ಸಾವು ಮತ್ತು ಸೋಂಕು ಪ್ರಕರಣಗಳ ಸಂಖ್ಯೆಯು ದಾಖಲೆಯ ಮಟ್ಟವನ್ನು ತಲುಪಲಿದೆ ಎಂದು ಬ್ರಿಟಿಶ್ ಸರಕಾರದ ಮುಖ್ಯ ವೈದ್ಯಕೀಯ ಸಲಹೆಗಾರ ಕ್ರಿಸ್ ವಿಟ್ಟಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ಕೋವಿಡ್-19 ಲಸಿಕೆ ವಿತರಣಾ ಪ್ರಮಾಣವನ್ನು ದೇಶದಲ್ಲಿ ಹೆಚ್ಚಿಸಲಾಗುತ್ತಿದೆ.

ಬ್ರಿಟನ್‌ನಲ್ಲಿ ಈವರೆಗೆ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಮೃತಪಟ್ಟವರ ಸಂಖ್ಯೆ 81,000ವನ್ನು ದಾಟಿದೆ ಹಾಗೂ 30 ಲಕ್ಷಕ್ಕೂ ಅಧಿಕ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಅದೂ ಅಲ್ಲದೆ, ಕೊರೋನ ವೈರಸ್‌ನ ರೂಪಾಂತರಿತ ಮಾದರಿಯ ಸೋಂಕಿನ ಪ್ರಮಾಣವೂ ಗಣನೀಯ ಪ್ರಮಾಣದಲ್ಲಿ ಏರುತ್ತಿದೆ. ಲಂಡನ್‌ನಲ್ಲಿ ಪ್ರತಿ 20 ಮಂದಿಯ ಪೈಕಿ ಒಬ್ಬರು ರೂಪಾಂತರಿತ ಕೊರೋನ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಅಂದಾಜಿಸಲಾಗಿದೆ.

‘‘ಕೊರೋನ ವೈರಸ್‌ಗೆ ಸಂಬಂಧಿಸಿ ಮುಂದಿನ ಕೆಲವು ವಾರಗಳು ಅತ್ಯಂತ ಕಠಿಣವಾಗಿರುತ್ತವೆ’’ ಎಂದು ಕ್ರಿಸ್ ವೆಟ್ಟಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News