ಟ್ರಂಪ್ ಅಧಿಕಾರಾವಧಿ ಜ.11ರಂದು ಕೊನೆಗೊಂಡಿದೆ ಎಂದ ಯುಎಸ್ ಸ್ಟೇಟ್ ಡಿಪಾರ್ಟ್‍ಮೆಂಟ್ ವೆಬ್‍ಸೈಟ್!

Update: 2021-01-12 08:57 GMT

ವಾಷಿಂಗ್ಟನ್,ಜ.12: ಅಮೆರಿಕಾದ ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ  ಅಧಿಕಾರಾವಧಿ ಜನವರಿ 11ರಂದು ಮುಕ್ತಾಯಗೊಂಡಿದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್‍ಮೆಂಟ್‍ನ ಅಧಿಕೃತ ವೆಬ್ ತಾಣದಲ್ಲಿ ಇರುವ ಮಾಹಿತಿ ಸಾಕಷ್ಟು ಗೊಂದಲ ಸೃಷ್ಟಿಸಿದೆಯಲ್ಲದೆ ಟ್ರಂಪ್ ರಾಜೀನಾಮೆ ನೀಡಿದ್ದಾರೆಯೇ ಎಂಬ ಊಹಾಪೋಹಗಳಿಗೂ ಕಾರಣವಾಗಿದೆ. ಈ ವೆಬ್ ಸೈಟ್ ಹ್ಯಾಕ್ ಆಗಿದೆಯೇ ಅಥವಾ ಟ್ರಂಪ್ ಅವರು ತಮ್ಮ ರಾಜೀನಾಮೆ ಘೋಷಿಸಲಿದ್ದಾರೆಯೇ ಎಂಬುದರ ಕುರಿತು ಸ್ಪಷ್ಟತೆಯಿಲ್ಲ ಎಂದು jantakareporter.com ವರದಿ ಮಾಡಿದೆ.

ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿ 2021-01-11ರಂದು 19:39:11ಗೆ ಅಂತ್ಯವಾಗಿದೆ ಎಂದು ಬರೆದಿದ್ದರೆ ನಂತರ ಇದನ್ನು ತಿದ್ದಿ ಗಂಟೆಯನ್ನು 19:48:41 ಎಂದು ಬದಲಾಯಿಸಲಾಗಿದೆ.

ಅಚ್ಚರಿಯೆಂದರೆ ಇಲ್ಲಿರುವ ಒಂದು ಲಿಂಕ್  ಬಳಕೆದಾರರನ್ನು  ಜೀವನಚರಿತ್ರೆ ಪುಟಕ್ಕೆ ಕೊಂಡೊಯ್ಯುತ್ತದೆ  ಆದರೆ ಇಲ್ಲಿ ಅಮೆರಿಕಾ-ಪಾಕಿಸ್ತಾನ್ ಮಹಿಳಾ ಕೌನವ್ಸಿಲ್ ಸದಸ್ಯೆಯರ ಜೀವನಚರಿತ್ರೆಯಿದೆಯೇ ಹೊರತು ಅಧ್ಯಕ್ಷರ ಜೀವನಚರಿತ್ರೆಯಿಲ್ಲ.ಇದಕ್ಕೆ ಯಾರು ಕಾರಣರು ಎಂದು ತಿಳಿದಿಲ್ಲವಾದೂ ಅಸಂತುಷ್ಟ ಉದ್ಯೋಗಿಯೊಬ್ಬರ ಕೈವಾಡ ಇದರ ಹಿಂದೆ ಇರಬಹುದು ಎಂದು ಪತ್ರಕರ್ತರೊಬ್ಬರು ಸಂಶಯ ವ್ಯಕ್ತಪಡಿಸಿದ್ದಾರೆ.

ಉಪಾಧ್ಯಕ್ಷ ಮೈಕ್ ಪೆನ್ಸ್ ಅವರು ಬುಧವಾರದೊಳಗೆ ಟ್ರಂಪ್ ಅವರನ್ನು ಹುದ್ದೆಯಿಂದ ಕೆಳಗಿಳಿಸಬೇಕೆಂದು ಕೋರದೇ ಇದ್ದರೆ  ಟ್ರಂಪ್ ಅವರನ್ನು ಪದಚ್ಯುತಗೊಳಿಸುವ ಪ್ರಕ್ರಿಯೆಯನ್ನು ಸದನ ಮುಂದುವರಿಸಲಿದೆ ಎಂದು ಸ್ಪೀಕರ್ ನ್ಯಾನ್ಸಿ ಪೆಲೋಸಿ ಸೋಮವಾರ ಹೇಳಿದ ನಂತರ ಈ ಬೆಳವಣಿಗೆ ನಡೆದಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News