ಗಡಿಯ ರಕ್ತಪಾತ ಭಾರತ-ಚೀನಾ ಬಾಂಧವ್ಯವನ್ನು ತೀವ್ರವಾಗಿ ಹದಗೆಡಿಸಿದೆ: ಎಸ್. ಜೈಶಂಕರ್

Update: 2021-01-12 16:40 GMT

ಜಮ್ಮು, ಜ. 12: 45 ವರ್ಷಗಳ ಬಳಿಕ ಗಡಿಯಲ್ಲಿ ಸಂಭವಿಸಿದ ‘ರಕ್ತಪಾತ’ ಭಾರತ ಹಾಗೂ ಚೀನಾ ನಡುವಿನ ಬಾಂಧವ್ಯವನ್ನು ತೀವ್ರ ಹದಗೆಡಿಸಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರ ಸಚಿವ ಎಸ್. ಜೈಶಂಕರ್ ಮಂಗಳವಾರ ಹೇಳಿದ್ದಾರೆ.

ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಜೂನ್‌ನಲ್ಲಿ ಭಾರತ ಹಾಗೂ ಚೀನಾ ಯೋಧರ ನಡುವೆ ನಡೆದ ಘರ್ಷಣೆಯನ್ನು ಉಲ್ಲೇಖಿಸಿ ಜೈ ಶಂಕರ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಘರ್ಷಣೆಯಿಂದ ಆರಂಭವಾದ ಉಭಯ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಜೂನ್‌ನಲ್ಲಿ ಭಾರತದ 20 ಯೋಧರ ಸಾವಿಗೆ ಕಾರಣವಾಗಿತ್ತು. ಆದರೆ, ಚೀನಾ ತನ್ನ ಭಾಗದಲ್ಲಿ ನಡೆದ ಯೋಧರ ಸಾವಿನ ಸಂಖ್ಯೆಯನ್ನು ಬಿಡುಗಡೆಗೊಳಿಸಲು ನಿರಾಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News