ಬಲಿಷ್ಠ ಭಾರತವು ಚೀನಾಕ್ಕೆ ತಡೆಯಾಗಬಲ್ಲದು: ಅವೆುರಿಕ

Update: 2021-01-13 15:28 GMT

ವಾಶಿಂಗ್ಟನ್, ಜ. 13: ಚೀನಾದ ಗಡಿ ಉಲ್ಲಂಘನೆಗಳನ್ನು ಎದುರಿಸುವ ಸಾಮರ್ಥ್ಯ ಭಾರತಕ್ಕಿದೆ ಎಂಬ ನಿಲುವನ್ನು ಅಮೆರಿಕದ ನಿರ್ಗಮನ ಟ್ರಂಪ್ ಸರಕಾರ ಹೊಂದಿದೆ ಎನ್ನುವುದನ್ನು ರಹಸ್ಯಮುಕ್ತಗೊಂಡ ದಾಖಲೆಯೊಂದು ತಿಳಿಸಿದೆ. ಬಲಿಷ್ಠ ಭಾರತವು ಹಿಂದೂ ಮಹಾಸಾಗರ-ಪೆಸಿಫಿಕ್ ವಲಯದಲ್ಲಿ ಸಮಾನ ಮನಸ್ಕ ದೇಶಗಳೊಂದಿಗಿನ ಸಹಕಾರದೊಂದಿಗೆ ಚೀನಾದ ಪ್ರಾಬಲ್ಯಕ್ಕೆ ಪ್ರಬಲ ತಡೆಯಾಗಿ ನಿಲ್ಲುವುದು ಎಂದು ದಾಖಲೆಯು ಅಭಿಪ್ರಾಯಪಟ್ಟಿದೆ.

10 ಪುಟಗಳ ದಾಖಲೆಯ ಕೆಲವು ಭಾಗಗಳನ್ನು ಇತ್ತೀಚೆಗೆ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒ’ಬ್ರಿಯನ್ ರಹಸ್ಯಮುಕ್ತಗೊಳಿಸಿದ್ದಾರೆ. ಈಗ ಅದನ್ನು ಶ್ವೇತಭವನದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

‘‘ಭದ್ರತಾ ವಿಷಯಗಳಲ್ಲಿ ಭಾರತದ ಆದ್ಯತಾ ಭಾಗೀದಾರ ಅವೆುರಿಕವಾಗಿದೆ. ಸಮುದ್ರ ಮಾರ್ಗಗಳ ಭದ್ರತೆಯನ್ನು ಕಾಪಾಡಲು ಹಾಗೂ ದಕ್ಷಿಣ ಮತ್ತು ಆಗ್ನೇಯ ಏಶ್ಯ ಹಾಗೂ ಪರಸ್ಪರ ಆಸಕ್ತಿಯಿರುವ ಇತರ ವಲಯಗಳಲ್ಲಿ ಚೀನಾದ ಪ್ರಭಾವವನ್ನು ಎದುರಿಸಲು ಎರಡು ದೇಶಗಳು ಸಹಕಾರ ನೀಡುತ್ತಿವೆ. ಚೀನಾದ ಗಡಿ ಉಲ್ಲಂಘನೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ’’ ಎಂದು ‘ಯುಎಸ್ ಸ್ಟ್ರಾಟಜಿಕ್ ಫ್ರೇಮ್‌ವರ್ಕ್ ಫಾರ್ ದ ಇಂಡೋ-ಪೆಸಿಫಿಕ್’ ಎಂಬ ಹೆಸರಿನ ರಹಸ್ಯ ದಾಖಲೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News