ರೂಪಾಂತರಿತ ಕೊರೋನ ಸೋಂಕಿನ ಪ್ರಕರಣ 102ಕ್ಕೆ ಏರಿಕೆ

Update: 2021-01-13 17:02 GMT

ಹೊಸದಿಲ್ಲಿ, ಜ. 12: ದೇಶದಲ್ಲಿ ರೂಪಾಂತರಿತ ಕೊರೋನ ಸೋಂಕಿನ ಪ್ರಕರಣಗಳು 102ಕ್ಕೆ ಏರಿಕೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಹೇಳಿದೆ. ಜನವರಿ 11ರ ವರೆಗೆ ರೂಪಾಂತರಿತ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ 96 ಇತ್ತು ಎಂದು ಸಚಿವಾಲಯ ತಿಳಿಸಿದೆ.

ಹೊಸ ರೂಪಾಂತರಿತ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ಇಂದು 102ಕ್ಕೆ ಏರಿಕೆಯಾಗಿದೆ. ಈ ಎಲ್ಲ ಸೋಂಕಿತರನ್ನು ಸಂಬಂಧಿತ ರಾಜ್ಯ ಸರಕಾರಗಳ ನಿಯೋಜಿತ ಆರೋಗ್ಯ ಸೇವೆ ಸೌಲಭ್ಯಗಳಲ್ಲಿರುವ ಏಕ ಕೊಠಡಿ ಐಸೋಲೇಶನ್‌ನಲ್ಲಿ ಇರಿಸಲಾಗಿದೆ. ಅವರ ನಿಕಟವರ್ತಿಗಳನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಸಹ ಪ್ರಯಾಣಿಕರು, ಕುಟುಂಬದ ಸಂಪರ್ಕ ಹಾಗೂ ಇತರರ ಸಮಗ್ರ ಸಂಪರ್ಕವನ್ನ ಶೋಧಿಸುವ ಕಾರ್ಯ ಆರಂಭವಾಗಿದೆ ಎಂದು ಸಚಿವಾಲಯ ತಿಳಿಸಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ. ಕಣ್ಗಾವಲು, ಕಂಟೈನ್ಮೆಂಟ್, ಪರೀಕ್ಷೆ ಹೆಚ್ಚಿಸಲು ರಾಜ್ಯ ಸರಕಾರಗಳಿಗೆ ನಿರಂತರ ಸಲಹೆಗಳನ್ನು ನೀಡಲಾಗುತ್ತಿದೆ ಹಾಗೂ ಮಾದರಿಗಳನ್ನು ಐಎನ್‌ಎಸ್‌ಎಸಿಒಜಿ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News