ದ.ಕ. ಜಿಲ್ಲೆಗೆ 24,500 ಕೋವಿಡ್ ಲಸಿಕೆ ಆಗಮನ

Update: 2021-01-14 08:03 GMT

ಮಂಗಳೂರು, ಜ.14: ದೇಶಾದ್ಯಂತ ಕೋವಿಡ್ ಲಸಿಕೆ ವಿತರಣೆಗೆ ಕ್ಷಣಗಣನೆ ಆರಂಭವಾಗಿದ್ದು, ದ.ಕ. ಜಿಲ್ಲೆಗೆ 24,500 ಕೋವಿಡ್ ಲಸಿಕೆ ಮೈಸೂರಿನಿಂದ ಆಗಮಿಸಿದೆ. ಜ.16ರಂದು ಲಸಿಕೆ ನೀಡಿಕೆ ಕಾರ್ಯಕ್ಕೆ ಚಾಲನೆ ದೊರೆಯಲಿದೆ.

ಇಂದು ಬೆಳಗ್ಗೆ ಒಟ್ಟು 42,500 ಕೋವಿಡ್ ಲಸಿಕೆ ಮಂಗಳೂರಿಗೆ ಆಗಮಿಸಿದ್ದು ಇದರಲ್ಲಿ ಉಡುಪಿಗೆ 12,000 ಹಾಗೂ ಚಿಕ್ಕಮಗಳೂರಿಗೆ 6,000 ಲಸಿಕೆಗಳು ಸೇರಿವೆ. ಉಡುಪಿಗೆ ಈಗಾಗಲೇ ಮಂಗಳೂರಿನಿಂದ ಲಸಿಕೆ ರವಾನೆಗೆ ಸಿದ್ಧತೆ ನಡೆದಿದೆ.

 ದ.ಕ. ಜಿಲ್ಲೆಗೆ ಸಂಬಂಧಿಸಿದ ಕೋವಿಶೀಲ್ಡ್ ಲಸಿಕೆಯನ್ನು ಆರೋಗ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಇಂದು ಬೆಳಗ್ಗೆ ವೆನ್ಲಾಕ್ ಆವರಣದಲ್ಲಿ ಇಳಿಸಿಕೂಂಡರು. ರಾಜ್ಯ ಸರಕಾರದಿಂದ ಹೊಸದಾಗಿ ನೀಡಿರುವ ಐ.ಎಲ್.ಆರ್. ಲಸಿಕಾ ಸಂಗ್ರಹಣದ ಕೋಲ್ಡ್ ಸ್ಟೋರೆಜ್‌ದಲ್ಲಿ ಅವುಗಳನ್ನು ಸಂಗ್ರಹಿಸಿ ಇಡಲಾಯಿತು. 

ಜ.16ರಂದು ದ.ಕ. ಜಿಲ್ಲೆಯ ಆರು ಕೇಂದ್ರಗಳಲ್ಲಿ ನೋಂದಾಯಿತ ಆರೋಗ್ಯ ಕಾರ್ಯಕರ್ತರಿಗೆ ಪ್ರಾಥಮಿಕ ಹಂತದಲ್ಲಿ ಲಸಿಕೆ ನೀಡಲಾಗುತ್ತದೆ.

ಮೊದಲ ಹಂತದಲ್ಲಿ ದ.ಕ. ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಸುರತ್ಕಲ್ ನಗರ ಪ್ರಾ. ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳಾದ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ಹಾಗೂ ಸುಳ್ಯದಲ್ಲಿ ತಲಾ 100 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು ಎಂದು ವೈದ್ಯಾಧಿಕಾರಿ ಡಾ.ರಾಜೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News