ಹಳೆಕೋಟೆ: ಜ.17ರಂದು ಮಯ್ಯತ್ ಪರಿಪಾಲನೆ ಶಿಬಿರ

Update: 2021-01-14 08:16 GMT

ಉಳ್ಳಾಲ, ಜ.14: ಹಳೆಕೋಟೆಯ ಮರ್ಖಲ್ ಇಸ್ಲಾಂ ಮದ್ರಸದ ಹಳೆವಿದ್ಯಾರ್ಥಿ ಸಂಘದ ವತಿಯಿಂದ ಜ.17ರಂದು ಮಗ್ರಿಬ್ ನಮಾಝ್ ಬಳಿಕ ಹಳೆಕೋಟೆ ಮಸೀದಿಯಲ್ಲಿ ಮಯ್ಯತ್ ಪರಿಪಾಲನೆ ಶಿಬಿರ ಆಯೋಜಿಸಲಾಗಿದೆ.

ಜನಾಝ ನಿರ್ವಹಣೆ, ಕಫನ್, ದಫನ ಹೇಗೆ ? ಹಾಗೂ ಮಯ್ಯತ್ ಪರಿಪಾಲನೆಯ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.

ಮಹಿಳೆಯರಿಗೆ ಪ್ರತ್ಯೇಕವಾಗಿ ಹಳೆಕೋಟೆ ಶಾಲಾ ವಠಾರದಲ್ಲಿ ಸ್ಕ್ರೀನ್ ವ್ಯವಸ್ಥೆ ಇರಲಿದೆ. ಈ ತರಬೇತಿ ಶಿಬಿರವು YouTube ಚಾನೆಲ್ Alfalah.live ಮೂಲಕ  ನೇರವಾಗಿ ಪ್ರಸಾರಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News