‘ಬ್ಯಾರಿ ಮಹನೀಯರು ಭಾಗ-2’ ಗ್ರಂಥ ಪ್ರಕಟನೆಗೆ ಲೇಖನ ನೀಡಲು ಮನವಿ

Update: 2021-01-14 09:07 GMT

ಮಂಗಳೂರು, ಜ.14: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ‘ಮರಕೊಗಾವಾತೊ ಮರ್ಹೂಂ ಬ್ಯಾರಿಙ (ಮರೆಯಲಾಗದ ದಿವಂಗತ ಬ್ಯಾರಿ ಮಹನೀಯರು) ಎಂಬ ಐತಿಹಾಸಿಕ ಗ್ರಂಥವನ್ನು ಈಗಾಗಲೇ ಬಿಡುಗಡೆಗೊಳಿಸಿದ್ದು, ಇದೀಗ ಈ ಗ್ರಂಥದ ಭಾಗ -2ರ ಪ್ರಕಟನೆ ಸಿದ್ಧತೆ ನಡೆಸಲಾಗಿದೆ.

ಇದರಲ್ಲಿ ಗತಿಸಿಹೋದ ಬ್ಯಾರಿ ಮಹನೀಯರ ಹಾಗೂ ಬದುಕಿರುವ ಬ್ಯಾರಿ ಸಾಧಕರ ಮಾಹಿತಿಯನ್ನು ನೀಡಲಾಗುತ್ತದೆ. ಕರ್ನಾಟಕ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಗಳಿಸಿರುವ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಬ್ಯಾರಿ ಮಹನೀಯರ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರಿಂದ ಆಹ್ವಾನಿಸಲಾಗಿದೆ. ಈ ಮಾಹಿತಿಗಳ ಪೈಕಿ ಪ್ರಾಶಸ್ತ್ಯ ಪಡೆದ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗುವುದು.

ಆಯ್ಕೆ ಮಂಡಳಿ ಲೇಖನವನ್ನು ಅಂತಿಮಗೊಳಿಸಿದ ಬಳಿಕ ಗ್ರಂಥವನ್ನು ಪ್ರಕಟಿಸಲಾಗುವುದು. ಇದರಲ್ಲಿ ವ್ಯಕ್ತಿ ಪರಿಚಯ, ಸಾಧನೆ, ಅಪರೂಪದ ಸಂಗ್ರಹ ಚಿತ್ರಗಳು ಅಡಕವಾಗಿರುತ್ತದೆ. ಲೇಖಕರ ಹೆಸರನ್ನು ಗ್ರಂಥದಲ್ಲಿ ನಮೂದಿಸಲಾಗುವುದು. ಲೇಖನವನ್ನು ಕಳುಹಿಸಿದ ಲೇಖಕರಿಗೆ ಗ್ರಂಥದ ಒಂದು ಪ್ರತಿಯನ್ನು ಉಚಿತವಾಗಿ ನೀಡಲಾಗುವುದು.

ಸಾರ್ವಜನಿಕರು ಬ್ಯಾರಿ ಭಾಷೆ, ಕಲೆ, ಸಾಹಿತ್ಯ, ರಾಜಕೀಯ, ಸಾಮಾಜಿಕ, ಶಿಕ್ಷಣ, ಔದ್ಯೋಗಿಕ, ಸರಕಾದ ಮಾಜಿ ಹಾಗೂ ಹಾಲಿ ನೌಕರರು, ಸಾಂಸ್ಕೃತಿಕ ಸಂಘಟಕರು ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಬ್ಯಾರಿ ಮಹನೀಯರ ಬಗ್ಗೆ ಅಕಾಡೆಮಿಯ ಕಚೇರಿಯ ವಾಟ್ಸಾಪ್ ಸಂಖ್ಯೆ 7483946578ಕ್ಕೆ ಅಥವಾ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ, ಸಾಮರ್ಥ್ಯ ಸೌಧ, ಮಂಗಳೂರು ತಾಪಂ ಹಳೆ ಕಟ್ಟಡ, 2ನೇ ಮಹಡಿ, ಮಿನಿ ವಿಧಾನ ಸೌಧದ ಬಳಿ, ಮಂಗಳೂರು 575001 ಈ ವಿಳಾಸಕ್ಕೆ ಫೆ.10ರೊಳಗೆ ಕಳುಹಿಸಿಕೊಡುವಂತೆ ಕೋರಲಾಗಿದೆ ಎಂದು ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News