ಅಲ್ ಮದೀನಾ ಅಲುಮ್ನಿ ಅಧ್ಯಕ್ಷರಾಗಿ ಶರೀಫ್ ಸಅದಿ ಮೂಡಬಿದ್ರಿ ಪುನರಾಯ್ಕೆ

Update: 2021-01-14 12:21 GMT

ನರಿಂಗಾನ: ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಇದರ ಹಳೆ ವಿದ್ಯಾರ್ಥಿ ಸಂಘಟನೆಯಾದ 'ಅಲ್ ಮದೀನಾ ಅಲುಮ್ನಿ ಅಸೋಸಿಯೇಶನ್' ಇದರ ವತಿಯಿಂದ ಗ್ರಾಂಡ್ ಅಲುಮ್ನಿ ಮೀಟ್ ಹಾಗು ಶೈಖುನಾ ಶರಫುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮವು ಅಲ್ ಮದೀನಾ ಕ್ಯಾಂಪಸ್ ನಲ್ಲಿ ಜರಗಿತು.

ಅಲ್ ಮದೀನಾ ಸಂಸ್ಥೆಯ ಜನರಲ್ ಮೆನೇಜರ್ ಅಬ್ದುಲ್ ಖಾದರ್ ಸಖಾಫಿ ಉದ್ಘಾಟಿಸಿದರು. ಶರೀಫ್ ಸಅದಿ ಮೂಡುಬಿದ್ರೆ ಅಧ್ಯಕ್ಷತೆ ವಹಿಸಿದರು. ಮುಹಮ್ಮದ್ ಕುಂಞಿ ಅಂಜದಿ, ಅಬ್ದುಲ್ ಸಲಾಂ ಅಹ್ಸನಿ, ರಝ್ಝಾಕ್ ಮಾಸ್ಟರ್ ನಾವೂರು, ಅಶ್ರಫ್ ಬಾಳೆಪುಣಿ ಶುಭ ಹಾರೈಸಿದರು. ಅಲುಮ್ನಿ ಪ್ರ.ಕಾರ್ಯದರ್ಶಿ ಇಕ್ಬಾಲ್ ಮರ್ಝೂಖಿ ಸಖಾಫಿ ಗೇರುಕಟ್ಟೆ ವರದಿ ಮಂಡಿಸಿದರು. ಬಳಿಕ ನೂತನ ಸಮಿತಿಯನ್ನು ರಚಿಸಲಾಯಿತು.

ನೂತನ ಸಮಿತಿ: ಅಧ್ಯಕ್ಷರಾಗಿ ಎಲ್.ಎಚ್ ಶರೀಫ್ ಸಅದಿ ಮೂಡುಬಿದ್ರೆ, ಪ್ರ.ಕಾರ್ಯದರ್ಶಿಯಾಗಿ ಇಮ್ತಿಯಾಜ್ ಸಜೀಪ, ಕೊಶಾಧಿಕಾರಿಯಾಗಿ ಇಮ್ರಾನ್ ಸುರತ್ಕಲ್, ಉಪಾಧ್ಯಕ್ಷರಾಗಿ ಇಕ್ಬಾಲ್ ಮರ್ಝೂಖಿ ಸಖಾಫಿ ಗೇರುಕಟ್ಟೆ ಹಾಗೂ ರಿಯಾಝ್ ಕುಂದಾಪುರ, ಜೊತೆ ಕಾರ್ಯದರ್ಶಿಗಳಾಗಿ ನಿಝಾರ್ ಗುರುಪುರ, ಅಶ್ರಫ್ ಬಾಳೆಪುಣಿ, ವರ್ಕಿಂಗ್ ಸೆಕ್ರೆಟರಿಯಾಗಿ ಕೆರೀಂ ಅಡ್ಕರೆ, ಮಾಧ್ಯಮ ಕಾರ್ಯದರ್ಶಿಯಾಗಿ ಲಿಬಾನ್ ಮರ್ಝೂಖಿ ಅಲ್ ರಬ್ಬಾನಿ, ಸಲಹೆಗಾರರಾಗಿ ಮುಹಮ್ಮದ್ ಕುಂಞಿ ಅಮ್ಜದಿ ಹಾಗೂ ಅಬ್ದುಲ್ ರಝಾಕ್ ಮಾಸ್ಟರ್ ಇವರನ್ನು ನೇಮಿಸಲಾಯಿತು. 

ಅಲುಮ್ನಿ ಪ್ರ.ಕಾರ್ಯದರ್ಶಿ ಇಕ್ಬಾಲ್ ಮರ್ಝೂಖಿ ಸಖಾಫಿ ಗೇರುಕಟ್ಟೆ ಸ್ವಾಗತಿಸಿ ಇಮ್ತಿಯಾಜ್ ಸಜೀಪ ವಂದಿಸಿದರು. ಕಬೀರ್ ಸಅದಿ ವೇಣೂರು ಕಿರಾಅತ್ ಪಠಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News