ಜಮಾಅತೆ ಇಸ್ಲಾಮಿ ಹಿಂದ್‌ನಿಂದ 2 ಬಡ ಕುಟುಂಬಗಳಿಗೆ ಮನೆ ಹಸ್ತಾಂತರ

Update: 2021-01-16 14:33 GMT

ಉಡುಪಿ, ಜ.16: ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಘಟಕದ ವತಿ ಯಿಂದ ದಾನಿಗಳ ನೆರವಿನಿಂದ ಎರಡು ಬಡ ಕುಟುಂಬ ಗಳಿಗೆ ನಿರ್ಮಿಸಲಾದ ಮನೆಗಳನ್ನು ಜ.15ರಂದು ಹಸ್ತಾಂತರಿಸಾಯಿತು.

ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿಯ ನಿರ್ದೇಶಕ ಅಶ್ರಫ್ ಮಂಗಳೂರು ಗುಜ್ಜರಬೆಟ್ಟಿನ ನಾಲ್ಕನೆ ರಸ್ತೆ ಬಳಿಯ ಮೊದಲ ಮನೆಯ ಕೀಲಿ ಕೈಯನ್ನು 8ನೆ ವಾರ್ಡಿನ ಪಂಚಾಯತ್ ಸದಸ್ಯರಾದ ಪುರಂದರ, ವತ್ಸಲ, ಡಾ.ಫಹೀಮ್ ಸಮ್ಮುಖದಲ್ಲಿ ಫಲಾನು ಭವಿಗೆ ಹಸ್ತಾಂತರಿಸಿದರು.

ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿಯ ನಾಯಕ ಅಮೀರ್ ಕುದ್ರೋಳಿ ಎರಡನೆ ಮನೆಯ ಕೀಲಿಕೈ 7ನೆ ವಾರ್ಡಿನ ಪಂಚಾಯತ್ ಸದಸ್ಯ ರಾದ ವಿಜಯ್, ಸುಜಾನ ಮತ್ತು ಮಮ್ತಾಝ್ ಸಮ್ಮುಖದಲ್ಲಿ ಫಲನುಭವಿಗೆ ಹಸ್ತಾಂತರಿಸಿದರು.

ತೋನ್ಸೆ ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟೇಶ್ ಕುಂದರ್ ಮಾತನಾಡಿದರು. ಇದ್ರಿಸ್ ಹೂಡೆ ಪ್ರಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಘಟಕದ ಅಧ್ಯಕ್ಷ ಅಬ್ದುಲ್ ಖಾದೀರ್, ತೋನ್ಸೆ ಪಂಚಾಯತ್ ಕಾರ್ಯದರ್ಶಿ ದಿನಕರ ಬೆಂಗ್ರೆ, ಮೌಲಾನ ಅಸ್ಘರ್ ಕಾಸ್ಮಿ, ಮೌಲಾನ ಆದಮ್ ಸಾಹೇಬ್, ಗ್ರಾಪಂ ಸದಸ್ಯರಾದ ಕುಸುಮಾ, ಜಮೀಲಾ, ವೆಲ್ಫೇರ್ ಪಕ್ಷದ ಝೈನುಲ್ಲಾ ಹೂಡೆ, ಎಸ್‌ಐಓನ ವಾಸೀಮ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News